ಬುಧವಾರ, ನವೆಂಬರ್ 20, 2019
20 °C

ತಂತ್ರಜ್ಞಾನ ಕಲಿಕೆ ಮೋಹ: ಮೂಲ ವಿಜ್ಞಾನಕ್ಕೆ ಪೆಟ್ಟು

Published:
Updated:

ಶಿವಮೊಗ್ಗ: ತಂತ್ರಜ್ಞಾನ ಮತ್ತು ವಿಜ್ಞಾನ ಪರಸ್ಪರ ಪೂರಕವಾದವು. ಆದರೆ, ತಂತ್ರಜ್ಞಾನಕ್ಕೆ ನೀಡುತ್ತಿರುವ ಮಹತ್ವ ಹೆಚ್ಚಿರುವುದರಿಂದ ಮೂಲ ವಿಜ್ಞಾನ ಶಿಥಿಲವಾಗುತ್ತಿದೆ ಎಂದು ಚಿಂತಕ ಪ್ರೊ.ಬಿ.ಪಿ. ವೀರೇಂದ್ರ ಕುಮಾರ್ ಆತಂಕ ವ್ಯಕ್ತಪಡಿಸಿದರು.ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಜ್ಞಾನ ಪರಿಷತ್ತಿನ ಸಮಾರೋಪ ಹಾಗೂ ಕ್ರೀಡಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ತಂತ್ರಜ್ಞಾನ ಕಲಿಕೆ ಬಗ್ಗೆ ಮೋಹ ಹೆಚ್ಚಿದೆ. ಸಮಾಜ ಇದರ ಕಲಿಕೆಗೆ ಅಗತ್ಯಕ್ಕಿಂತ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ವಿಷಾದಿಸಿದರು.ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕಲಿಕೆ ಬಗ್ಗೆ ಆಸಕ್ತಿವಹಿಸಬೇಕು. ಸಂಶೋಧನೆಯಲ್ಲಿ ಹೆಚ್ಚಿನ ಅವಕಾಶಗಳಿವೆ. ಅವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲರಾದ ಪ್ರೊ.ಜಿ. ಶಕುಂತಲಾ ಅಧ್ಯಕ್ಷತೆ ವಹಿಸಿದ್ದರು. ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ್ ಸುಳ್ಯ, ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್‌ನಾಯ್ಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಗೋಪಾಲ್‌ನಾಯ್ಕ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಎಚ್.ಎಂ. ವಾಗ್ದೇವಿ, ದೈಹಿಕ ಶಿಕ್ಷಣ ನಿರ್ದೇಶಕ ಕೆ. ಲಕ್ಷ್ಮಣಪ್ಪ, ವಿಜ್ಞಾನ ಪರಿಷತ್ತು ಅಧ್ಯಾಪಕ ಕಾರ್ಯದರ್ಶಿ ಡಾ.ಸಯ್ಯದ್ ಸನಾವುಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)