ತಂತ್ರಜ್ಞಾನ ಪ್ರದರ್ಶನದಲ್ಲಿ ವಿದ್ಯುತ್ ಉಳಿಸುವ ದಾರಿಗಳು

7

ತಂತ್ರಜ್ಞಾನ ಪ್ರದರ್ಶನದಲ್ಲಿ ವಿದ್ಯುತ್ ಉಳಿಸುವ ದಾರಿಗಳು

Published:
Updated:
ತಂತ್ರಜ್ಞಾನ ಪ್ರದರ್ಶನದಲ್ಲಿ ವಿದ್ಯುತ್ ಉಳಿಸುವ ದಾರಿಗಳು

ಇಂದು ವಿದ್ಯುತ್ ಪೂರೈಕೆಯಲ್ಲಿ ಅಗಾಧ ಕೊರತೆ ಇದೆ. ವಿದ್ಯುತ್ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವೂ ಹೆಚ್ಚಾಗುತ್ತಿದೆ. ಹಾಗಾದರೆ ವಿದ್ಯುತ್ ಉಳಿಸುವುದು ಹೇಗೆ? ವಿದ್ಯುತ್ ಉಳಿಕೆಗೆ ನೆರವಾಗಬಲ್ಲ ಸಾಧನಗಳು ಯಾವುವು? ವಿದ್ಯುತ್ ಪುನರ್ಬಳಕೆ ಸಾಧ್ಯವೆ? ಹೀಗೆ ವಿದ್ಯುಚ್ಛಕ್ತಿಯ ಉಳಿಕೆಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲು ಹೊರಟಿದೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ.ಟ್ರೈಯೂನ್ ಎಕ್ಸಿಬಿಟರ್ಸ್‌ ಪ್ರೈ. ಲಿಮಿಟೆಡ್ ಜೊತೆಗೂಡಿ ಸಂಸ್ಥೆಯು `ಇಂಟರ್‌ನ್ಯಾಷನಲ್ ರಿನ್ಯೂವೆಬಲ್ ಎನರ್ಜಿ ಶೋ' ತಂತ್ರಜ್ಞಾನ ಪ್ರದರ್ಶನವನ್ನು (ಅಂತರರಾಷ್ಟ್ರೀಯ ವಿದ್ಯುತ್ ಪುನರ್‌ಬಳಕಾ ಪ್ರದರ್ಶನ)  ಹಮ್ಮಿಕೊಂಡಿದೆ.ಜನವರಿ 4ರಿಂದ 6ರವರೆಗೆ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಈ ಪ್ರದರ್ಶನದಲ್ಲಿ ವಿದ್ಯುತ್ ಉತ್ಪಾದನೆಯ ನೂತನ ಆವಿಷ್ಕಾರಗಳ ಎಲ್ ಏಷ್ಯಾ 2013 ಪ್ರದರ್ಶನವೂ ಇರಲಿದೆ.ಸೌರ ಶಕ್ತಿ, ಪವನ ಶಕ್ತಿ, ಜೈವಿಕ, ಜಲ, ಭೂ, ಶಾಖೋತ್ಪನ್ನ ಹೀಗೆ ವಿವಿಧ ಶಕ್ತಿ ಮೂಲಗಳನ್ನು ಕೇಂದ್ರೀಕರಿಸಿದ ಹೊಸ ತಂತ್ರಜ್ಞಾನ, ಉತ್ಪನ್ನಗಳೂ ಪ್ರದರ್ಶನದಲ್ಲಿ ಲಭ್ಯ. ವಿದ್ಯುತ್ ಉಳಿಸುವುದರೊಂದಿಗೆ ಪರಿಸರಕ್ಕೆ ನೆರವಾಗುವಂತಹ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗುವುದು.

ವಿದ್ಯುತ್ ಉಳಿತಾಯಕ್ಕೆ ಎಡೆಮಾಡಿಕೊಡುವ ಕೈಗಾರಿಕಾ ಹಾಗೂ ಗೃಹಬಳಕೆಯ ಉತ್ಪನ್ನಗಳು ಹಾಗೂ ವಿದ್ಯುತ್ ಸಮಸ್ಯೆಗೆ ಪರಿಹಾರ, ಸೌರಶಕ್ತಿ ಬಳಸಿ ಕೃಷಿ ಚಟುವಟಿಕೆ ಹಾಗೂ ಗ್ರಾಮೀಣ ಬದುಕಿನ ಅಭಿವೃದ್ಧಿ ಹೀಗೆ ಹಲವು ವಿಷಯಗಳ ಕುರಿತು ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.ವಿದ್ಯುತ್ ಉಳಿಕೆಗೆ ಅತ್ಯಾಧುನಿಕ ತಂತ್ರಜ್ಞಾನ

ಶಕ್ತಿಯ ಸಂಪನ್ಮೂಲಗಳು ಕುಗ್ಗುತ್ತಿರುವ ಈ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ವಿದ್ಯುತ್ ಉಳಿಸುವ ಮಾರ್ಗೋಪಾಯಗಳು ಕಾಣುತ್ತಿವೆ. ಇದಕ್ಕೆಂದೇ ಕೆಲವು ಉತ್ಪನ್ನಗಳನ್ನು ಕೂಡ ಹೊರತರಲಾಗಿದೆ.ತೂಗುವ ಕುರ್ಚಿ: ನ್ಯಾನೊ ಡೈನಮೋ ತಂತ್ರಜ್ಞಾನವನ್ನು ಕುರ್ಚಿಗೆ ಅಳವಡಿಸುವುದರ ಮೂಲಕ ಉತ್ಪಾದನೆಯಾದ ವಿದ್ಯುತ್ ಒಂದು ಎಲ್‌ಇಡಿ ದೀಪವನ್ನು ಬೆಳಗಿಸುವ ಸಾಮರ್ಥ್ಯ ಹೊಂದಿದೆ.

ಸೋಲಾರ್ ಪ್ಯಾನೆಲ್ ಲಾಂಜ್:  ಸೋಲಾರ್ ಪ್ಯಾನೆಲ್ಸ್ ಹೊಂದಿರುವ ಲಾಂಜ್ ಟೇಬಲ್ ಅನ್ನು ಉದ್ಯಾನವನ ಅಥವಾ ತಾರಸಿಯ ಮೇಲಿಟ್ಟರೆ, ಅದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದನ್ನು ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ಚಾರ್ಜ್ ಮಾಡಬಹುದಾಗಿದೆ. ಈ ಟೇಬಲ್ ವರ್ಷಕ್ಕೆ 17 ಕಿಲೊ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದರಿಂದ 300 ಬಾರಿ ಮೊಬೈಲ್ ಹಾಗೂ 200 ಬಾರಿ ಲ್ಯಾಪ್‌ಟಾಪ್ ಚಾರ್ಜ್ ಮಾಡಬಹುದಾಗಿದೆ.ಎಕೊಟೈಪಿಕ್ ಬೆಡ್, ರಾಕಿಂಗ್ ಚೇರ್.

ಪ್ರದರ್ಶನವನ್ನು ಇಂದು (ಜ.4) ಬೆಳಿಗ್ಗೆ 11ಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಉದ್ಘಾಟಿಸಲಿದ್ದು, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಪರಿಸರ ವಿಜ್ಞಾನ, ಪರಿಸರ, ಯೋಜನಾ ಮತ್ತು ಸ್ಟ್ಯಾಟಿಸ್ಟಿಕ್ಸ್ ಸಚಿವ ಸೊಗಡು ಶಿವಣ್ಣ, ಕರ್ನಾಟಕ ರಿನ್ಯೂವೆಬಲ್ ಎನರ್ಜಿ ಡೆವಲಪ್‌ಮೆಂಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ್, ರಾಷ್ಟ್ರೀಯ ಸಣ್ಣ ಕೈಗಾರಿಕಾ ಲಿಮಿಟೆಡ್‌ನ ಪ್ರಾದೇಶಿಕ ಜನರಲ್ ಮ್ಯಾನೇಜರ್ ಪಿ. ರವಿಕುಮಾರ್ ಮುಂತಾದವರು ಆಗಮಿಸಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry