ಮಂಗಳವಾರ, ಮೇ 18, 2021
23 °C

ತಂದೆಯಿಂದ ಪುತ್ರಿಯರ ಹತ್ಯೆ ಯತ್ನ: ಒಬ್ಬಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಹ್ತಕ್ (ಪಿಟಿಐ): ಪತ್ನಿಯೊಂದಿಗೆ ನಡೆದ ಜಗಳದ ಪ್ರತೀಕಾರವನ್ನು ಮಕ್ಕಳ ಮೇಲೆ ತೀರಿಸಿಕೊಳ್ಳಲು ಮುಂದಾದ ತಂದೆಯೊಬ್ಬ ತನ್ನ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ನೇಣು ಹಾಕಿ ಕೊಲ್ಲಲು ಯತ್ನಿಸಿದ ಘಟನೆ ಹರಿಯಾಣದ ಜಾಜ್ಜರ್ ಜಿಲ್ಲೆಯ, ಬಾಹು ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಇವರಲ್ಲಿ ಒಂದು ಮಗು ಸತ್ತು, ಮತ್ತಿಬ್ಬರು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ತಂದೆ ಮುಖೇಶ್ ಕೈಯಿಂದಲೇ ಜಿಯಾ (4) ಮೃತಪಟ್ಟರೆ, ಆಕೆಯ ಸಹೋದರಿಯರಾದ ಪಾಯಲ್ (7) ಮತ್ತು ವರ್ಷಾ ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.`ಕೌಟುಂಬಿಕ ಕಲಹ ಇದಕ್ಕೆ ಕಾರಣ ಎನ್ನಲಾಗಿದ್ದು,  ಮುಖೇಶ್  ಪುತ್ರಿಯ ರನ್ನು ದೊಣ್ಣೆಯಿಂದ ಥಳಿಸಿ ನಂತರ  ಮೂವರನ್ನೂ ಫ್ಯಾನ್‌ಗೆ ನೇಣು ಹಾಕಿದ್ದಾನೆ~ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.