ಶನಿವಾರ, ನವೆಂಬರ್ 16, 2019
21 °C

ತಂಪು ಪಾನೀಯ ಮಧುಮೇಹಕ್ಕೆ ದಾರಿ...

Published:
Updated:

ಲಂಡನ್ (ಪಿಟಿಐ): ಸಕ್ಕರೆ ಅಂಶವಿರುವ 336 ಮಿಲಿ ಲೀಟರ್ ತಂಪು ಪಾನೀಯ ಸೇವನೆಯಿಂದ ಮಧುಮೇಹವು ಶೇ 22ರಷ್ಟು ಉಲ್ಬಣಗೊಳ್ಳುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.ತಂಪು ಪಾನೀಯ ಸೇವಿಸಿದ ದಿನ ಪ್ರತಿ ಮಧುಮೇಹ ರೋಗಿಯಲ್ಲಿ ಶೇ 22ರಷ್ಟು ಸಕ್ಕರೆ ಅಂಶ ಜಾಸ್ತಿಯಾಗುತ್ತದೆ ಎಂದು ಇಲ್ಲಿನ ಇಂಪೀರಿಯಲ್ ಕಾಲೇಜಿನ ಸಂಶೋಧಕರ ತಂಡ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.ಮಧುಮೇಹವಿಲ್ಲದವರು ಮತ್ತು ಮಧುಮೇಹ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 336 ಮಿಲಿ ಲೀಟರ್‌ನ ಒಂದು ಬಾಟಲಿ ಸಿಹಿ ತಂಪು ಪಾನೀಯ ಸೇವಿಸಿದವರು ಮತ್ತು ಇದೇ ಪ್ರಮಾಣದ ಎರಡು ಬಾಟಲಿ ಪಾನೀಯ ಸೇವಿಸಿದವರನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯದಲ್ಲಿನ ಬದಲಾವಣೆಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.ಜೇನಿನ ಮಕರಂದ, ಕೃತಕ ಸಿಹಿಯುಕ್ತ ತಂಪು ಪಾನೀಯ ಮತ್ತು ಹಣ್ಣಿನ ರಸದಿಂದ ತಯಾರಿಸಿದ ತಂಪು ಪಾನೀಯದ ಕುರಿತು ಸಂಶೋಧಕರ ತಂಡ ಅಂಕಿ ಅಂಶ ಸಂಗ್ರಹಿಸಿದೆ. ಮಧುಮೇಹ ರೋಗದಿಂದ ಬಳಲುತ್ತಿರುವ 12,403 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿದೆ.

ಪ್ರತಿಕ್ರಿಯಿಸಿ (+)