ತಂಪು ಪಾನೀಯ ಸಮಿತಿ ಪುನರ್‌ರಚನೆ

7

ತಂಪು ಪಾನೀಯ ಸಮಿತಿ ಪುನರ್‌ರಚನೆ

Published:
Updated:

ನವದೆಹಲಿ (ಐಎಎನ್‌ಎಸ್): ಇಂಗಾಲದ ಡೈ ಆಕ್ಸೈಡ್‌ನ ಅಂಶಗಳನ್ನು ಹೊಂದಿರುವ ತಂಪುಪಾನೀಯಗಳಲ್ಲಿಬಳಸುವ ಹಾನಿಕಾರಕ ರಾಸಾಯನಿಕ ವಸ್ತುಗಳನ್ನು ಪತ್ತೆ ಹಚ್ಚುವ ಸಲುವಾಗಿರುವ ವಿಜ್ಞಾನಿಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ಪುನರ್‌ರಚಿಸುವುದಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎ) ಮಂಗಳವಾರ  ಸುಪ್ರೀಂಕೋರ್ಟ್‌ಗೆ ತಿಳಿಸಿದೆ.ಈಗ ಇರುವ ಸಮಿತಿಯು ತಂಪುಪಾನೀಯ ತಯಾರಿಕಾ ಕಂಪೆನಿಗಳೊಂದಿಗೆ ಗುರುತಿಸಿಕೊಂಡಿರುವ ತಜ್ಞರನ್ನು ಒಳಗೊಂಡಿದ್ದು, ತನ್ನ ಸ್ವತಂತ್ರ ನಿಲುವಿನಲ್ಲಿ ರಾಜಿ ಮಾಡಿಕೊಂಡಿತ್ತು. ಇದು ಸುಪ್ರೀಂಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿತ್ತು.ತಂಪು ಪಾನೀಯಗಳಲ್ಲಿರುವ ರಾಸಾಯನಿಕ ಅಂಶಗಳ  ಮತ್ತು ಅವುಗಳಿಂದ ಆರೋಗ್ಯದ ಮೇಲೆ ಆಗುವ ಹಾನಿಯ ಕುರಿತಾಗಿಯೂ ಅಧ್ಯಯನ ನಡೆಸಲಾಗಿದೆ ಎಂದು ಕೋರ್ಟ್‌ಗೆ ತಿಳಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry