ಶನಿವಾರ, ಮೇ 8, 2021
20 °C

ತಂಬಾಕು ಉತ್ಪನ್ನ ದಹಿಸಿ ಜನಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂಬಾಕು ಉತ್ಪನ್ನ ದಹಿಸಿ ಜನಜಾಗೃತಿ

ಬೀದರ್: ವಿಶ್ವ ತಂಬಾಕು ವಿರೋಧಿ ದಿನದ ಪ್ರಯುಕ್ತ ಶಾಹೀನ್ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ತಂಬಾಕು ಉತ್ಪನ್ನಗಳನ್ನು ದಹಿಸಿ ಜನಜಾಗೃತಿ ಮೂಡಿಸಿದರು.ನಗರದ ಅಂಬೇಡ್ಕರ್ ವೃತ್ತದ ಬಳಿ ಸೇರಿದ ವಿದ್ಯಾರ್ಥಿಗಳು ಬೀಡಿ, ಸಿಗರೇಟ್, ಗುಟ್ಕಾ, ಖೈನಿ, ಜರ್ದಾ, ಪಾನ್‌ಮಸಾಲಾ ಮತ್ತಿತರ ತಂಬಾಕು ಉತ್ಪನ್ನಗಳನ್ನು ಸುಟ್ಟು ಹಾಕಿದರು.`ತಂಬಾಕು ಸೇವನೆ ಸಾವಿಗೆ ಆಹ್ವಾನ, ತಂಬಾಕುವಿನಿಂದ ದೂರವಿರಿ, ತಂಬಾಕು ಉತ್ಪನ್ನಗಳನ್ನು ನಿಷೇಧಿಸಿ' ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಬಳಿಕ ತಾವು ತಂಬಾಕು ವಸ್ತುಗಳನ್ನು ಸೇವಿಸುವುದಿಲ್ಲ. ತಂಬಾಕು ದುಷ್ಪರಿಣಾಮದ ಬಗೆಗೆ ನೆರೆಹೊರೆಯ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.ರಾಜ್ಯ ಸರ್ಕಾರ ಗುಟ್ಕಾ ನಿಷೇಧಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಜನರ ಹಿತದೃಷ್ಟಿಯಿಂದ ಇದನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು ಎಂದು ಶಾಹೀನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್  ನುಡಿದರು.ದೇಶದಲ್ಲಿ ಶೇ 34.6 ರಷ್ಟು ಜನ ತಂಬಾಕು ಚಟಕ್ಕೆ ದಾಸರಾಗಿದ್ದಾರೆ. ಇದರಲ್ಲಿ ಮಹಿಳೆಯರು, ಯುವಕರು ಹಾಗೂ 15 ವರ್ಷದ ಒಳಗಿನ ಮಕ್ಕಳೂ ಸೇರಿರುವುದು ಆಘಾತಕಾರಿ. ಶೇ 50 ರಷ್ಟು ಪುರುಷ ಮತ್ತು ಶೇ 25 ರಷ್ಟು ಮಹಿಳೆಯರಲ್ಲಿ ಕ್ಯಾನ್ಸರ್‌ಗೆ ತಂಬಾಕು ಕಾರಣ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.