ಮಂಗಳವಾರ, ಆಗಸ್ಟ್ 11, 2020
27 °C

ತಂಬಾಕು ನಿಷೇಧ ದಿನ ದೂರವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೆಲವು ಗ್ರಾಮಗಳಲ್ಲಿ ಸಾರಾಯಿ ನಿಷೇಧಿಸಿದ ರೀತಿಯಲ್ಲಿ ತಂಬಾಕನ್ನು ಜನರೇ ನಿಷೇಧ ಮಾಡುವ ದಿನಗಳು ದೂರವಿಲ್ಲ ಎಂದು ಗೊಲ್ಲಾಳೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಎಂ.ಕೆ.ಪಾಟೀಲ ಹೇಳಿದರು.`ವಿಶ್ವ ತಂಬಾಕು ನಿಷೇಧ ದಿನ~ ಅಂಗವಾಗಿ ನಗರದ ಶರಣಗೌಡ ಪಾಟೀಲ ಡಿ.ಇಡಿ. ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರಪ್ರಚಾರ ನಿರ್ದೇಶನಾಲಯ, ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹಜೀವನ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗುಲ್ಬರ್ಗ, ಮತ್ತು ಕಿರಣ ಗ್ರಾಮೀಣ ರಿಕನ್‌ಸ್ಟ್ರಕ್ಷನ್ ಸೊಸೈಟಿ, ರಾಷ್ಟ್ರೀಯ ಸೇವಾ ಯೋಜನೆ ಘಟಕವು ವಿಚಾರ ಸಂಕಿರಣ ಆಯೋಜಿಸಿತ್ತು.ವ್ಯಾಪಾರದ ಉದ್ದೆೀಶಕ್ಕಾಗಿ ಪೋರ್ಚುಗೀಸರು 1602ರಲ್ಲಿ ಭಾರತಕ್ಕೆ ತಂಬಾಕನ್ನು ತಂದರು. ಇದರ ಸೇವೆನೆಯಿಂದ ಯುವ ಜನತೆ ನರಳುತ್ತಿದೆ. ಪಾಲಕರು ಹಾಗೂ ಶಿಕ್ಷಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ತಿಳಿವಳಿಕೆ ನೀಡಬೇಕೆಂದರು.ಜಿಲ್ಲಾ ಕ್ಯಾನ್ಸರ್ ಆಸ್ಪತ್ರೆಯ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗದ ಡಾ. ಜಯರಾಜ ಕಲಶೆಟ್ಟಿ ಮಾತನಾಡಿ, ತಂಬಾಕಿನಿಂದ ಇಂದು ದೇಶದಲ್ಲಿ 50 ಲಕ್ಷ ಜನ ರೋಗಳಿಗೆ ತುತ್ತಾಗಿದ್ದಾರೆ. ವಿಶ್ವದಲ್ಲಿ 24 ಕೋಟಿ ಜನರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯಗಳಲ್ಲಿ ಧೂಮಪಾನ ನಿಷೇಧ ಕಾಯಿದೆಯನ್ನು ಕೇಂದ್ರ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂದರು.ಕಚೇರಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಹೋಟೆಲ್ ದವಾಖಾನೆಗಳಲ್ಲಿ `ಕಡ್ಡಾಯವಾಗಿ ಧೂಮಪಾನ ನಿಷೇಧ~ ಎಂದು ಸೂಚನಾ ಫಲಕ ಹಾಕಬೇಕು ಎಂದರು. ಜಿಲ್ಲಾ ವಿಜ್ಞಾನ ಕೇಂದ್ರದ ವಿಜ್ಞಾನ ಶಿಕ್ಷಣಾಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ, ಶೇ 40ರಷ್ಟು ರೋಗಗಳು ತಂಬಾಕು ಸೇವನೆಯಿಂದ ಬರುತ್ತವೆ. ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಕಳವಳಕಾರಿ ಎಂದ ಅವರು, ಪ್ರತಿವರ್ಷ 47 ಸಾವಿರ ಕೋಟಿ ರೂಪಾಯಿಯಷ್ಟು ವಹಿವಾಟು ತಂಬಾಕು ಉದ್ದಿಮೆಯಿಂದ ಸರ್ಕಾರಕ್ಕೆ ಆಗುತ್ತಿದೆ.27 ಲಕ್ಷ ಜನರಿಗೆ  ಉದ್ಯೋಗವು ಲಭಿಸಿದೆ. ಹೀಗಾಗಿ ತಂಬಾಕು ಉದ್ದಿಮೆ ನಿಷೇಧ ಕಷ್ಟಸಾಧ್ಯವಾಗಿದೆ. ಅದರ ಬದಲು ನಾವೇ ಸೇವನೆ ಹಾಗೂ ಮಾರಾಟವನ್ನು ನಿಲ್ಲಿಸಿದರೆ ಉತ್ತಮ ಎಂದರು.ಕ್ಷೇತ್ರಪ್ರಚಾರ ಸಹಾಯಕ ಶಿವಶರಣಪ್ಪ ಕಿಣಗಿ ಮಾತನಾಡಿ, ಜನರು ತಿಳಿವಳಿಕೆ ಪಡೆದು ತಂಬಾಕಿನಿಂದ ಹರಡುವ ರೋಗದಿಂದ ಮುಕ್ತರಾಗಬೇಕು ಎಂದರು.ರಮೇಶ ಬಡಿಗೇರ, ಸೋಮಶೇಖರ ಚಿನಮ್ಮಳಿ ಡಾ. ವಸಂತ ಹರಸೂರ ಇದ್ದರು.  ಎಂ.ಎಂ. ಶಿರಹಟ್ಟಿ ವಂದಿಸಿದರು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.