ತಂಬಾಕು ಬಳಕೆಯಿಂದ ಕ್ಯಾನ್ಸರ್ ನಿಶ್ಚಿತ

ಸೋಮವಾರ, ಜೂಲೈ 15, 2019
25 °C

ತಂಬಾಕು ಬಳಕೆಯಿಂದ ಕ್ಯಾನ್ಸರ್ ನಿಶ್ಚಿತ

Published:
Updated:

ಕಂಪ್ಲಿ: ಗುಟ್ಕಾ ಅಗೆಯುವುದರಿಂದ ಮತ್ತು ಧೂಮಪಾನ ಮಾಡುವುದರಿಂದ ಕ್ಯಾನ್ಸರ್ ರೋಗಿಗಳಾಗುವುದರಲ್ಲಿ ಸಂದೇಹವಿಲ್ಲ ಎಂದು ಆಯುಷ್ ಇಲಾಖೆ ವೈದ್ಯಾ ಧಿಕಾರಿ ಡಾ. ಸಂತೋಷ ತಾಡಪತ್ರಿ ಎಚ್ಚರಿಸಿದರು.ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ `ವಿಶ್ವ ತಂಬಾಕು ರಹಿತ~ ದಿನಾಚರಣೆ ಉದ್ಘಾ ಟಿಸಿ ಮಾತನಾಡಿ, ವಿದ್ಯಾವಂತರಿಗೂ ತಂಬಾಕು, ಧೂಮಪಾನ ಸೇವನೆಯಿಂದ ಹಾನಿಕರ ಎಂದು ತಿಳಿದಿದ್ದರು ಬಲಿಯಾ ಗುತ್ತಿರುವುದು ದುರದೃಷ್ಟಕರ ಎಂದರು.ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರು ಕಾನೂನು ಉಲ್ಲಂಘಿ ಸುತ್ತಾರೆ. ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ವ್ಯಕ್ತಿಗಳು ತಾವಾಗಿ ಅರಿ ಯದೆ ಚಟಗಳು ಅವರನ್ನು ಬಿಟ್ಟು ಹೋಗುವುದಿಲ್ಲ. ಈ ಬಗ್ಗೆ ಆವ ಲೋಕನ ಅಗತ್ಯ ಎಂದು ಪ್ರತಿಪಾದಿಸಿದರು.ದಂತ ವೈದ್ಯ ಡಾ.ಟಿ. ಬಾಲಕೃಷ್ಣ ಮಾತ ನಾಡಿ, ಕೆಲವು ರಾಸಾಯನಿಕ ಗಳಿಂದ ಕೂಡಿದ ತಂಬಾಕು ಸೇವಿಸುವುದರಿಂದ ದಂತಗಳಿಗೆ ದುಷ್ಪರಿಣಾಮವಾಗಿ ಕ್ಯಾನ್ಸರ್ ಹರಡುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರಿ ಭಾರತಿ ಅಕ್ಕ ಮಾತನಾಡಿ, ಸರ್ಕಾರ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿ ಜನ ತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಚಿಂತನೆ ನಡೆಸು ವಂತೆ ಮನವಿ ಮಾಡಿ ದರು.ಪ್ರತಿಯೊಬ್ಬರು ಯೋಗ, ಧ್ಯಾನ ಮಾಡಿ ದುಶ್ಚಟಗಳಿಂದ ದೂರವಿರುವಂತೆ ತಿಳಿಸಿದರು.  ಸರಸ್ವತಿ ಪ್ರಾರ್ಥಿಸಿದರು. ಬಿ.ಕೆ.ಸುಧಾಕರ ಸ್ವಾಗತಿಸಿದರು. ಪತ್ತಾರ ವಂದಿಸಿದರು. ಶರಣಪ್ಪ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry