ಭಾನುವಾರ, ಜೂನ್ 20, 2021
28 °C

ತಗ್ಗಿದ ವಿತ್ತೀಯ ಕೊರತೆ ಅಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆರಿಗೆ ಮತ್ತು ವರಮಾನ ಹೆಚ್ಚಳದಿಂದ ರಾಜ್ಯದ ವಿತ್ತೀಯ ಕೊರತೆಯು ರೂ15,312 ಕೋಟಿಗಳಿಗೆ ಇಳಿಕೆಯಾಗುವ ನಿರೀಕ್ಷೆ ಇದೆ. ಹಣಕಾಸು ವರ್ಷದ ಅಂತ್ಯಕ್ಕೆ ಇದು ಒಟ್ಟು ಆರ್ಥಿಕ ವೃದ್ಧಿ ದರದ (ಜಿಡಿಪಿ) ಶೇ 2.94ರಷ್ಟು ಇರಲಿದೆ.ಪ್ರಸಕ್ತ ಸಾಲಿನಲ್ಲಿ, ಹಿಂದಿನ ಬಜೆಟ್ ಅಂದಾಜಿಗಿಂತಲೂ ಹೆಚ್ಚುವರಿಯಾಗಿ ರೂ931 ಕೋಟಿ ವರಮಾನ ಸಂಗ್ರಹವಾಗುವ ಸಾಧ್ಯತೆ ಇದೆ. 2010-11ನೇ ಸಾಲಿನ ಬಜೆಟ್‌ನಲ್ಲಿ ಅಂದಾಜಿಸಿರುವುದಕ್ಕಿಂತಲೂ ರೂ45,775 ಕೋಟಿಗಳಷ್ಟು ಹೆಚ್ಚುವರಿ ವರಮಾನ ಸಂಗ್ರಹವಾಗಿದೆ. ಇದರಿಂದ ಸರ್ಕಾರದ ಸಾಲದ ಹೊರೆ ರೂ4,124 ಕೋಟಿಗಳಷ್ಟು ತಗ್ಗಲಿದೆ.13ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅಳವಡಿಸಲು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಈ ಮೂಲಕ ಬಿಗಿ ವಿತ್ತೀಯ ನೀತಿ ಕಾಯ್ದುಕೊಳ್ಳಲಾಗಿದೆ. ಕಳೆದ ವರ್ಷದಲ್ಲಿ ರಾಜ್ಯ ಒಟ್ಟಾರೆ ವರಮಾನ ಸಂಗ್ರಹ ಹೆಚ್ಚಳಕ್ಕೆ ಇದೇ ಮುಖ್ಯ ಕಾರಣ. ವಿತ್ತಿಯ ಕೊರತೆ ಅಂತರವು ಕಾಯ್ದೆ ನಿಗದಿಪಡಿಸಿರುವ ಮಿತಿಯಲ್ಲೇ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.