ಮಂಗಳವಾರ, ಜೂನ್ 15, 2021
20 °C

ತಗ್ಗಿದ ಸಕ್ಕರೆ ತಯಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಪ್ರಸಕ್ತ ಮಾರು­ಕಟ್ಟೆ ವರ್ಷದ (ಅಕ್ಟೋಬರ್‌–ಸೆಪ್ಟೆಂಬ­ರ್‌) ಮಾರ್ಚ್‌ 15ರವರೆಗೆ ದೇಶದ ಒಟ್ಟಾರೆ ಸಕ್ಕರೆ ತಯಾರಿಕೆ ಶೇ 8.5ರಷ್ಟು ಕುಸಿದಿದ್ದು, 193.8 ಲಕ್ಷ ಟನ್‌ಗಳಿಗೆ ಇಳಿದಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾ­ನೆಗಳ ಒಕ್ಕೂಟ (ಐಎಸ್‌ಎಂಎ) ಹೇಳಿದೆ.

ಕಳೆದ ಮಾರುಕಟ್ಟೆ ವರ್ಷದಲ್ಲಿ 251 ಲಕ್ಷ ಟನ್‌ ಸಕ್ಕರೆ ತಯಾರಿ­ಸಲಾಗಿತ್ತು.ಈ ಬಾರಿ, ಮಧ್ಯಪ್ರದೇಶ, ಉತ್ತರ­ಪ್ರದೇಶ, ಆಂಧ್ರಪ್ರದೇಶ ಮತ್ತು ಗುಜರಾ­ತ್‌ನಲ್ಲಿ ಸಕ್ಕರೆ ತಯಾರಿಕೆ ಕಡಿಮೆ ಆಗಿದೆ. ಹಲವು ರಾಜ್ಯಗಳಲ್ಲಿ ಕಬ್ಬು ಅರೆ ಯುವಿಕೆ ಕಾರ್ಯ ಇನ್ನೂ ನಡೆ­ಯುತ್ತಿದೆ. ಮಾ.15ರವರೆಗಿನ ಅಂಕಿ ಅಂಶದಂತೆ ದೇಶದಾದ್ಯಂತ 428 ಸಕ್ಕರೆ ಕಾರ್ಖಾ­ನೆ ಗಳಲ್ಲಿ ಕಬ್ಬು ಅರೆಯುವಿಕೆ ನಡೆಯು ತ್ತಿದೆ.ಮಹಾರಾಷ್ಟ್ರದಲ್ಲಿ ಮಾ.15ರವರೆಗೆ 64 ಲಕ್ಷ ಟನ್‌ ಸಕ್ಕರೆ ತಯಾರಿ­ಸಲಾಗಿದೆ. ಕಳೆದ ವರ್ಷದ ಇದೇ ಅವಧಿ­ಯಲ್ಲಿ 72 ಲಕ್ಷ ಟನ್‌ ಸಕ್ಕರೆ ತಯಾರಿ­ಸ ಲಾಗಿತ್ತು. ಉತ್ತರ ಪ್ರದೇಶ­ದಲ್ಲೂ ಸಕ್ಕರೆ ತಯಾರಿಕೆ 58 ಲಕ್ಷ ಟನ್‌ಗಳಿಂದ 50 ಲಕ್ಷ ಟನ್‌ಗೆ ಇಳಿದಿದೆ.  ಗುಜರಾ­ತ್‌ನಲ್ಲಿ 9.70 ಲಕ್ಷ ಟನ್‌ ಮತ್ತು ಆಂಧ್ರಪ್ರದೇಶ ದಲ್ಲಿ 8.80 ಲಕ್ಷ ಟನ್‌ ಸಕ್ಕರೆ ತಯಾರಿಕೆ ದಾಖ­ಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿ ದರೆ ಇದು ಶೇ 4ರಷ್ಟು ಕಡಿಮೆ ಇದೆ. ತಮಿಳು­ನಾಡಿನಲ್ಲಿ ಸಕ್ಕರೆ ತಯಾರಿಕೆ ಕಳೆದ ವರ್ಷದ 11.50 ಲಕ್ಷ ಟನ್‌ಗ ಳಿಂದ ಎಂಟು ಲಕ್ಷ ಟನ್‌ಗಳಿಗೆ  ಇಳಿದಿದೆ ಎಂದೂ ‘ಐಎಸ್‌ಎಂಎ’ ಹೇಳಿದೆ.ಈ ನಡುವೆ, ಕರ್ನಾಟಕದಲ್ಲಿ ಸಕ್ಕರೆ ತಯಾರಿಕೆ ಶೇ 8ರಷ್ಟು ಹೆಚ್ಚಿದೆ. ಮಾ. 15ರವರೆಗೆ ರಾಜ್ಯದಲ್ಲಿ 3.45 ಲಕ್ಷ ಟನ್‌ಗಳಷ್ಟು ಸಕ್ಕರೆ ತಯಾರಿ­ಸಲಾಗಿದೆ.

ಅಕ್ಟೋಬರ್‌–ಫೆಬ್ರುವರಿ ಅವಧಿ ಯಲ್ಲಿ ಸಕ್ಕರೆ ಕಾರ್ಖಾನೆಗಳು 10 ಲಕ್ಷ ಟನ್‌ ಕಚ್ಚಾ ಸಕ್ಕರೆ ತಯಾ­ರಿಸಿವೆ. ಇದ ರಲ್ಲಿ 6 ಲಕ್ಷ ಟನ್‌ ರಫ್ತಾ­ಗಿದೆ ಎಂದೂ ‘ಐಎಸ್‌ಎಂಎ’ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.