ಮಂಗಳವಾರ, ಆಗಸ್ಟ್ 20, 2019
25 °C

ತಡಿಬಿಡಿ: ಸಂಭ್ರಮದ ಪರ್ವ

Published:
Updated:

ಯಾದಗಿರಿ: ಸಮೀಪದ ತಡಿಬಿಡಿ ಗ್ರಾಮದ ಹೊರವಲಯದ ಬಂಡೆಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರೆಲ್ಲ ಸೇರಿ ಭಾನುವಾರ ಪರ್ವವನ್ನು ಆಚರಿಸಿದರು.ಪ್ರತಿ ವರ್ಷ ಶ್ರಾವಣ ಮಾಸದ ಮುನ್ನಾ ದಿನ ಈ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ರಾತ್ರಿಯಿಡೀ ಭಜನೆ ಮಾಡಿ ಬೆಳಿಗ್ಗೆ ಗಂಗಾ ಪೂಜೆ ನೆರವೇರಿಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಊರಿನ ಜನರೆಲ್ಲ ಸೇರಿ ಜೋಳದ ನುಚ್ಚು ಸಿದ್ಧಪಡಿಸುತ್ತಾರೆ.

ಹಬ್ಬದ ಹಿನ್ನೆಲೆ: ತಲೆಮಾರುಗಳಿಂದ ಈ ಹಬ್ಬವನ್ನು ಗ್ರಾಮಸ್ಥರು ಆಚರಿಸುತ್ತ ಬಂದಿದ್ದಾರೆ. ಗ್ರಾಮದಲ್ಲಿ ಸರಿಯಾಗಿ ಮಳೆಯಾಗದಿದ್ದರೆ ಬಂಡೆಲಿಂಗೇಶ್ವರ ದೇವಸ್ಥಾನದಲ್ಲಿ ಪರ್ವ ಆಚರಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಹೀಗಾಗಿ ಇಂದಿಗೂ ಪರ್ವವನ್ನು ಆಚರಿಸುತ್ತ ಬಂದಿದ್ದಾರೆ.ಪ್ರತಿವರ್ಷ ಪರ್ವ ಆಚರಿಸುವ ಸಮಯದಲ್ಲಿ ಮಳೆ ಬಂದಿದೆ ಎಂದು ಗ್ರಾಮದ ಈರಪ್ಪ ಪೂಜಾರಿ, ದೊಡ್ಡಣ್ಣಪ್ಪ ವಗ್ಗಾಯಿ, ಸಣ್ಣ ನಿಂಗಪ್ಪ ವಗ್ಗಯ್ಯ ಹೇಳುತ್ತಾರೆ. ಗ್ರಾಮಸ್ಥರೆಲ್ಲರೂ ಈ ಪರ್ವದಲ್ಲಿ ಕಡ್ಡಾಯವಾಗಿ ಭಾಗವಹಿಸುವುದು ವಿಶೇಷವಾಗಿದೆ.

Post Comments (+)