ತಡೆಗೋಡೆ ಕುಸಿದು ಕಾರ್ಮಿಕ ಸಾವು

ಬುಧವಾರ, ಜೂಲೈ 24, 2019
27 °C

ತಡೆಗೋಡೆ ಕುಸಿದು ಕಾರ್ಮಿಕ ಸಾವು

Published:
Updated:

ಬೆಂಗಳೂರು: ರಾಮಮೂರ್ತಿನಗರ ಸಮೀಪದ ಲಕ್ಷ್ಮಣಮೂರ್ತಿನಗರದಲ್ಲಿ ಶುಕ್ರವಾರ ಮಧ್ಯಾಹ್ನ ಚರಂಡಿ ಕಾಮಗಾರಿ ವೇಳೆ ಸ್ಮಶಾನದ ತಡೆಗೋಡೆ (ಕಾಂಪೌಂಡ್) ಕುಸಿದು ವೆಂಕಟಸ್ವಾಮಿ (60) ಎಂಬ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಗಾಯಾಳುಗಳಾದ ನರಸಿಂಹ ಮತ್ತು ಬಾಲಾಜಿರಾವ್ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ರಾಮಮೂರ್ತಿನಗರ ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮಣಮೂರ್ತಿನಗರದ ಆಲದ ಮರ ಬಸ್ ನಿಲ್ದಾಣದ ಬಳಿ ಬಿಬಿಎಂಪಿ ಚರಂಡಿ ಕಾಮಗಾರಿ ಕೈಗೊಂಡಿದೆ.

 

ಈ ಜಾಗಕ್ಕೆ ಹೊಂದಿಕೊಂಡಂತೆ ಸ್ಮಶಾನದ ತಡೆಗೋಡೆ ಇದೆ. ವೆಂಕಟಸ್ವಾಮಿ, ಮತ್ತಿಬ್ಬ ರು ಚರಂಡಿ ನಿರ್ಮಾಣಕ್ಕಾಗಿ ಗುಂಡಿ ತೆಗೆಯುತ್ತಿದ್ದಾಗ ಸ್ಮಶಾನದ ತಡೆಗೋಡೆ ಕುಸಿದಿದೆ. ಕಾಮಗಾರಿಯ ಮೇಸ್ತ್ರಿ ಶಾಂತಪ್ಪ ಅವರನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry