ತಡೆಹಿಡಿದಿದ್ದ ವೇತನ ಬಿಡುಗಡೆ

7

ತಡೆಹಿಡಿದಿದ್ದ ವೇತನ ಬಿಡುಗಡೆ

Published:
Updated:

ಬೆಂಗಳೂರು: ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಕಳೆದ ಡಿಸೆಂಬರ್ 8ರಿಂದ 15ರವರೆಗೆ ತರಗತಿಗಳನ್ನು ಬಹಿಷ್ಕರಿಸಿದ್ದ ಅವಧಿಯ ತಡೆ ಹಿಡಿಯಲಾಗಿದ್ದ ವೇತನವನ್ನು ನೀಡಲು ಸರ್ಕಾರ ಒಪ್ಪಿಕೊಂಡಿದೆ.ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾಯಿತ ಪ್ರತಿನಿಧಿಗಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ತಡೆಹಿಡಿಯಲಾಗಿದ್ದ ವೇತನ ಬಿಡುಗಡೆ ಮಾಡುವುದಾಗಿ ಕಾಗೇರಿ ಹೇಳಿದ್ದಾರೆ.ಮುಷ್ಕರ ನಡೆಸಿದ ಎಂಟು ದಿನಗಳ ಪೈಕಿ ಮೂರು ದಿನವನ್ನು ರಜೆ ಎಂದು ಪರಿಗಣಿಸಲಾಗುತ್ತದೆ. ಉಳಿದ ಐದು ದಿನಗಳ ಮುಷ್ಕರದ ನಷ್ಟವನ್ನು ಉಪನ್ಯಾಸಕರು ಐದು ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ತುಂಬಿಕೊಡಬೇಕು ಎಂಬ ಷರತ್ತಿಗೆ ಒಳಪಟ್ಟು ತಡೆಹಿಡಿಯಲಾಗಿದ್ದ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ಕಾಗೇರಿ ತಿಳಿಸಿದರು.ವೇತನ ನೀಡಲು ಸಮ್ಮತಿಸಿದ ಸಚಿವರಿಗೆ ಕೃತಜ್ಞತೆ ಸಲ್ಲಿಸಿರುವ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಜಿ.ಕೆ.ಶ್ರೀರಾಮ್, ಆದಷ್ಟು ಬೇಗ ವೇತನ ತಾರತಮ್ಯವನ್ನು ನಿವಾರಿಸಬೇಕು ಎಂದು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry