ತಣ್ಣಗಾಗದ ತೆಲಂಗಾಣ ವಿವಾದ

7
ಉಭಯ ಸದನಗಳಲ್ಲಿ ವಾಕ್ಸಮರ

ತಣ್ಣಗಾಗದ ತೆಲಂಗಾಣ ವಿವಾದ

Published:
Updated:

ನವದೆಹಲಿ (ಪಿಟಿಐ): ಇನ್ನೂ ತಣ್ಣಗಾಗದ ತೆಲಂಗಾಣ ವಿವಾದ ಗುರುವಾರ ಮತ್ತೊಮ್ಮೆ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ತೆಲಂಗಾಣ ವಿಷಯವಾಗಿ ಕಾಂಗ್ರೆಸ್ ಮತ್ತು ಟಿಡಿಪಿ ಸಂಸದರು ಕಟುವಾದ ಶಬ್ದಗಳಿಂದ ಪರಸ್ಪರ ನಿಂದಿಸಿಕೊಂಡ ಕಾರಣ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಕಾಂಗ್ರೆಸ್ ಸಂಸದ ವಿ. ಅರುಣ್ ಕುಮಾರ ಅವರು ತೆಲಂಗಾಣ ವಿಷಯ ಪ್ರಸ್ತಾಪಿಸಿದಾಗ ಟಿಡಿಪಿ ಸಂಸದ ನಾಮಾ ನಾಗೇಶ್ವರ ರಾವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಉಭಯ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ನಾಂದಿ ಹಾಡಿತು.

ಪರಸ್ಪರರ ವಿರುದ್ಧ ಘೊಷಣೆ ಕೂಗುತ್ತಿದ್ದ ಸಂಸದರನ್ನು ಸಚಿವರಾದ ಪಿ.ಚಿದಂಬರಂ ಮತ್ತು ಜೈರಾಂ ರಮೇಶ್ ಅವರು ಸಮಾಧಾನಗೊಳಿಸಿದರು.ಆಂಧ್ರ ಪ್ರದೇಶ ಇಬ್ಭಾಗ ವಿರೋಧಿಸಿ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದ ಟಿಡಿಪಿ ಸಂಸದರು, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಪ್ರಸ್ತಾಪದ ನಂತರ ರಾಜ್ಯದಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಸರ್ವಪಕ್ಷ ಸಮಿತಿ ನೇಮಕ ಮಾಡುವಂತೆ ಆಗ್ರಹಿಸಿದರು.  ತೆಲಂಗಾಣ ವಿಷಯ ತಿಳಿಗೊಳ್ಳುತ್ತಿದ್ದಂತೆಯೇ ಶ್ರೀಲಂಕಾ ತಮಿಳು ಭಾಷಿಕರ ಸಮಸ್ಯೆ ಕೇಳಿ ಬಂತು. ತಮಿಳು ಭಾಷಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಶ್ರೀಲಂಕಾವನ್ನು ಕಾಮನ್‌ವೆಲ್ತ್ ಒಕ್ಕೂಟದಿಂದ ಹೊರ ಹಾಕಲು ಭಾರತ ಯತ್ನಿಸಬೇಕು ಡಿಎಂಕೆ ಸಂಸದ ಟಿ.ಆರ್. ಬಾಲು ಬೇಡಿಕೆ ಮುಂದಿಟ್ಟರು.ಕೊಲೊಂಬೊದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಶೃಂಗಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಲ್ಗೊಳ್ಳಬಾರದು ಎಂದು ಮನವಿ ಮಾಡಿದರು. ಪಂಜಾಬ್‌ನಲ್ಲಿ ರೈತರ ದಯನೀಯ ಸ್ಥಿತಿಯನ್ನು ಕುರಿತ ಚೆರ್ಚೆ ಶಿರೋಮಣಿ ಅಕಾಲಿದಳ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಎರಡನ ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry