ಸೋಮವಾರ, ಮೇ 10, 2021
26 °C

ತನಿಖಾಧಿಕಾರಿ ಧೋರಣೆ...

ಕೆ.ರಮಾಕಾಂತ,ಬಳ್ಳಾರಿ Updated:

ಅಕ್ಷರ ಗಾತ್ರ : | |

ಸರ್ಕಾರ ಬದಲಾದ ಕಾರಣ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಈ ತೀರ್ಮಾನ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಿಗೂ ಅನ್ವಯವಾಗಬೇಕು. ಅವರ ಸದಸ್ಯತ್ವವನ್ನು ಕೂಡಲೇ ರದ್ದುಗೊಳಿಸಿ ಆ ಜಾಗಕ್ಕೆ ಯೋಗ್ಯರನ್ನು, ಶಿಕ್ಷಣ ತಜ್ಞರನ್ನು, ಸಾಹಿತಿ-ಕಲಾವಿದರನ್ನು ನೇಮಿಸಬೇಕು.ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡವರಲ್ಲಿ ಯೋಗ್ಯರು, ತಜ್ಞರಿಗಾಗಿ ದುರ್ಬೀನು ಹಾಕಿ ಹುಡುಕಬೇಕಿತ್ತು. ಅವರಲ್ಲಿ ಶೇ 90 ಮಂದಿ ಬಿಜೆಪಿ ಇಲ್ಲವೇ ಸಂಘ ಪರಿವಾರ ಮೂಲದವರು. ಪಕ್ಷದ ಕಾರ್ಯಕರ್ತರು ಅಥವಾ ಪಕ್ಷದ ಚಿಹ್ನೆಯಡಿ ಚುನಾವಣೆಗೆ ಸ್ಪರ್ಧಿಸಿ  ಸೋತವರು. ಇವರಿಗೆ ವಿಶ್ವವಿದ್ಯಾಲಯದ ಕಾಯಿದೆ, ನಿಯಮಗಳ ಬಗ್ಗೆ ಗೊತ್ತಿಲ್ಲ. ತನಿಖಾಧಿಕಾರಿಗಳ ಧೋರಣೆಯಿಂದ ನಡೆದುಕೊಂಡವರೇ ಹೆಚ್ಚು.ಈ ರೀತಿಯ ಮನೋಭಾವದ ಜನರು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ತುಂಬಿಹೋಗಿದ್ದಾರೆ. ಇವರೆಲ್ಲ ಹಿಂದೂತ್ವದ ಅಜೆಂಡಾ ಹಿಡಿದು ಬಂದಿದ್ದಾರೆ. ತಲೆಗೆ ಪೂರ್ವಗ್ರಹಗಳನ್ನು ತುಂಬಿಕೊಂಡಿದ್ದಾರೆ. ಇವರ ಮೆದುಳಿನಲ್ಲಿ ಜ್ಞಾನ, ಶಿಕ್ಷಣಕ್ಕೆ ಬದಲಾಗಿ ಹುಸಿ `ಶೂರತ್ವ' ತುಂಬಿದೆ. ಈ ಕಾರಣದಿಂದ ಹೊಸ ಸರ್ಕಾರ ಇಟ್ಟಿರುವ ಹೆಜ್ಜೆ ಸ್ವಾಗತಾರ್ಹ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.