ತನಿಖಾ ಸಮಿತಿ ಭೇಟಿ, ವಿಚಾರಣೆ
ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಮಿಮ್ಸ್) ನೇಮಕದಲ್ಲಿನ ಅಕ್ರಮ, ಬಡ್ತಿಗಾಗಿ ನಕಲಿ ಪ್ರಮಾಣ ಪತ್ರ ಹಾಜರು ಪಡಿಸಿರುವುದು, ಅಧಿಕಾರ ದುರ್ಬಳಕೆ ಮತ್ತಿತರ ಆರೋಪಗಳ ತನಿಖೆಗೆ ಸರ್ಕಾರ ನೇಮಿಸಿರುವ ವಿಶ್ರಾಂತ ನ್ಯಾಯ ಮೂರ್ತಿ ನೇತೃತ್ವದ ಸಮಿತಿ ಗುರು ವಾರ ವಿಚಾರಣೆಯನ್ನು ಆರಂಭಿಸಿತು.ಬೆಳಿಗ್ಗೆ 11 ಗಂಟೆಯ ವೇಳೆಗೆ ನ್ಯಾಯಮೂರ್ತಿ ಎಸ್.ನಾರಾಯಣ್ ಮಿಮ್ಸ್ಗೆ ಆಗಮಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ. ಅರುಣಾ ಅವರು ಹಾಜರಿದ್ದರು.
ಮಿಮ್ಸ್ನ ಪ್ರಾಚಾರ್ಯರ ಕೊಠಡಿಯಲ್ಲಿ ಮಧ್ಯಾಹ್ನ 2 ಗಂಟೆಯ ವರೆಗೂ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಅವರಿಂದ ಮಾಹಿತಿ ಪಡೆ ಯಿತು. ಈ ಸಂದರ್ಭದಲ್ಲಿ ಪೂರಕ ವಾದ ದಾಖಲೆಗಳ ವಿವರಗಳನ್ನು ಕೋರಿತು ಎಂದು ಹೇಳಲಾಗಿದೆ. ಮಿಮ್ಸ್ ಅಕ್ರಮ ಕುರಿತು ದೂರು ನೀಡಿದ್ದ ನಗರದ ಪ್ರಗತಿಪರ ಚಿಂತಕರ ಒಕ್ಕೂಟದ ಪ್ರೊ.ಎಚ್.ಎಲ್. ಕೇಶವ ಮೂರ್ತಿ, ಎಚ್.ವಾಸು ಅವರಿಂ ದಲೂ ಮಾಹಿತಿ ಪಡೆದು, ಆರೋಪಕ್ಕೆ ಪೂರಕವಾದ ಕೆಲ ದಾಖಲೆಗಳನ್ನು ಪಡೆಯಿತು.
ಅಲ್ಲದೆ, ಆರೋಪಗಳು ಮತ್ತು ಪೂರಕ ದಾಖಲೆಗಳನ್ನು ಒಳಗೊಂ ಡಂತೆ ಲಿಖಿತ ವಾಗಿಯೂ ಒಂದು ವಾರದಲ್ಲಿ ಮಾಹಿತಿ ನೀಡು ವಂತೆಯೂ ನ್ಯಾಯಮೂರ್ತಿಗಳು ಸೂಚಿಸಿದರು ಎಂದು ವಾಸು ತಿಳಿಸಿದರು.
ತಿಂಗಳಲ್ಲಿ ವರದಿ: ವಿಚಾರಣೆಯ ನಡುವೆಯೇ ಮಾಧ್ಯಮದ ಜೊತೆಗೆ ಮಾತನಾಡಿದ ನ್ಯಾಯ ಮೂರ್ತಿ ನಾರಾಯಣ್ ಅವರು, ಮಿಮ್ಸ್ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ತನಿಖೆಯನ್ನು ನಡೆಸುತ್ತಿದ್ದು, ಒಂದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಎ.ರಾಮದಾಸ್ ಈಚೆಗೆ ಮಿಮ್ಸ್ ಮತ್ತು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಪರಿಶೀಲನೆ ನಡೆಸಿದ ಸಂದರ್ಭ ದಲ್ಲಿ ಕಟ್ಟಡ ನಿರ್ಮಾಣ, ವೈದ್ಯರ ನೇಮಕದಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸತ್ಯ ಎನಿಸುತ್ತಿದೆ. ಇದರ ತನಿಖೆಗೆ ನಿವೃತ್ತ ನ್ಯಾಯಾ ಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದರು.
ಇದಕ್ಕೆ ಪೂರಕವಾಗಿ ನಗರದ ಪ್ರೊ. ಎಚ್.ಎಲ್.ಕೇಶವಮೂರ್ತಿ ನೇತೃ ತ್ವದ ಪ್ರಗತಿ ಪರ ಚಿಂತಕರ ಒಕ್ಕೂಟವು ‘ಮಿಮ್ಸ್ ಅಕ್ರಮ: ಮುಂದೇನು?’ ಹೆಸರಿನಲ್ಲಿ ಕಿರುಹೊತ್ತಿಗೆಯನ್ನು ಪ್ರಕ ಟಿಸಿತ್ತು. ಮಿಮ್ಸ್ನ ಅನೇಕ ಪ್ರೊಫೆ ಸರ್ಗಳು ಆ ಸ್ಥಾನವನ್ನು ಪಡೆಯಲು ಖೊಟ್ಟಿ ದಾಖಲೆಗಳನ್ನು ಹಾಜರು ಪಡಿಸಿದ್ದಾರೆ ಎಂದು ಆರೋಪಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.