ಶುಕ್ರವಾರ, ಮೇ 27, 2022
30 °C

ತನಿಖೆಗೆ ಅನುಮತಿ ಕೋರಿ ಸಚಿವಾಲಯಕ್ಕೆ ಮತ್ತೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏರ್‌ಬಸ್ ವಿಮಾನ ಖರೀದಿ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆಪಾದಿಸಲಾಗಿರುವ ಆರು ಹಿರಿಯ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಿಬಿಐ ಮತ್ತೆ ಪತ್ರ ಬರೆದಿದೆ.ಆಪಾದಿತರನ್ನು ವಿಚಾರಣೆಗೆ ಒಳಪಡಿಸಲು ನಾಗರಿಕ ವಿಮಾನಯಾನ ಸಚಿವಾಲಯ ಕಡ್ಡಾಯವಾಗಿ ಅನುಮತಿ ಪತ್ರ ನೀಡಬೇಕು. ಆದರೆ, ಈ ಪತ್ರ ನೀಡುವಂತೆ ಸಿಬಿಐ ಕಳೆದ ಏಳು ತಿಂಗಳಿಂದ ಪದೇ ಪದೇ ಮಾಡಿಕೊಂಡ ಮನವಿಗಳಿಗೆ ಸಚಿವಾಲಯ ಸ್ಪಂದಿಸದ ಕಾರಣ ಆರೋಪಿಗಳ ವಿರುದ್ಧ ತನಿಖೆ ಆರಂಭಿಸಲು ಈವರೆಗೂ ಆಗಿಲ್ಲ.ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಸಿಬಿಐ ಅನ್ನು ಕೋರಿತ್ತು. ಆದರೆ, ಆರೋಪಿಗಳ ವಿರುದ್ಧ ತನಿಖೆ ನಡೆಸಲು ಅಗತ್ಯವಾದ ಸಾಕ್ಷ್ಯಾಧಾರಗಳು ಮೇಲ್ನೋಟಕ್ಕೆ  ಪೂರಕವಾಗಿಯೇ ಇದೆ ಎಂದು ಹೇಳಿದ ಸಿಬಿಐ; ಅನುಮತಿ ಪತ್ರ ನೀಡುವಂತೆ ಮತ್ತೆ ಮನವಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.