ತನಿಖೆಗೆ ಮಾನವ ಹಕ್ಕುಗಳ ಆಯೋಗದ ಭರವಸೆ

7
ಲಿಂಗಪತ್ತೆ ‘ಸ್ಕ್ಯಾನಿಂಗ್‌‘ ಯಂತ್ರ ನರ್ಸಿಂಗ್‌ ಹೋಂಗೆ ವಾಪಸು

ತನಿಖೆಗೆ ಮಾನವ ಹಕ್ಕುಗಳ ಆಯೋಗದ ಭರವಸೆ

Published:
Updated:

ರಾಮನಗರ: ‘ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ (ಪಿಸಿ ಮತ್ತು ಪಿಎನ್‌ಡಿಟಿ) ಉಲ್ಲಂಘಿಸಿದ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ವಶಪಡಿಸಿಕೊಂಡಿದ್ದ ಚನ್ನಪ ಟ್ಟಣದ ಬಾಲು ನರ್ಸಿಂಗ್‌ ಹೋಂನ ‘ಸ್ಕ್ಯಾನಿಂಗ್‌‘ ಯಂತ್ರವನ್ನು ಏಕಾಏಕಿ ನರ್ಸಿಂಗ್‌ ಹೋಂಗೆ ಹಿಂತಿ ರುಗಿಸಿರುವುದರ ಕುರಿತು ತನಿಖೆ ನಡೆಸಲಾಗು ವುದು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋ ಗದ ಸದಸ್ಯ ಎಡ್ವರ್ಡ್‌ ಥಾಮಸ್‌ ತಿಳಿಸಿದರು.ನಿಯಮ ಮೀರಿ ಜಿಲ್ಲಾ ಆರೋಗ್ಯ ಅಧಿಕಾರಿ ಅವರು ಬಾಲು ನರ್ಸಿಂಗ್‌ ಹೋಂಗೆ ಸ್ಕ್ಯಾನಿಂಗ್‌ ಯಂತ್ರವನ್ನು ಹಿಂತಿರುಗಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಂದಾಯ ಭವನದ ಮುಂಭಾಗ ಮಂಗಳ ವಾರ  ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ವಿರೋಧಿ ಸಮಿತಿ ಸದಸ್ಯರು ನಡೆಸಿದ ಒಂದು ದಿನ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ ಅವರು ಮಾತನಾಡಿದರು.‘ರಾಜಧಾನಿಗೆ ಹತ್ತಿರವಿರುವ ರಾಮನಗರ ಜಿಲ್ಲಾ  ಆಸ್ಪತ್ರೆ, ನರ್ಸಿಂಗ್‌ ಹೋಂ, ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಹೆಣ್ಣು ಭ್ರೂಣ ಪತ್ತೆ ಕಾರ್ಯ ನಡೆಯುತ್ತಿದೆ ಎಂದರೆ ಆಶ್ಚರ್ಯವಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯೇ ತನಿಖಾ ತಂಡ ರಚಿಸಿ ರಾಮನಗರಕ್ಕೆ ಕಳುಹಿಸಲಾಗುವುದು. ತನಿಖಾ ತಂಡದ ಸದಸ್ಯರು ಡಿಎಚ್‌ಒ ಮತ್ತು ಡಿ.ಸಿ ಕಾರ್ಯವೈಖರಿ ಮತ್ತು ಪ್ರಕರಣದ ಆಳ, ಅಗಲದ ಬಗ್ಗೆ ತನಿಖೆ ನಡೆಸಿ ವರದಿ ನೀಡುವರು’ ಎಂದು ಅವರು ಹೇಳಿದರು.‘ಇದಕ್ಕೆ ಪೂರಕವಾಗಿ ಡಿಎಚ್‌ಒ ಮತ್ತು ಜಿಲ್ಲಾಧಿ ಕಾರಿ ಅವರಿಗೆ ಆಯೋಗದಿಂದ ಪತ್ರ ಬರೆದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕೈಗೊಂ ಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಲಾಗುವುದು. ಜತೆಗೆ ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆಯಲಾಗುವುದು’ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ನಡೆಯುತ್ತಿರುವ ಸ್ಕ್ಯಾನಿಂಗ್ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದು, ಅಲ್ಲಿ ಎಂತಹ ಕಾರ್ಯಗಳು ನಡೆಯುತ್ತಿವೆ ಎಂಬುದರ ಕುರಿತು ಸಂಶೋಧನಾ ವರದಿ ಸಿದ್ಧಪಡಿಸಲು ಆಯೋಗ ಸೂಕ್ತರಿಗೆ ಸೂಚಿ ಸಲಿದೆ ಎಂದು ಅವರು ಮಾಹಿತಿ ನೀಡಿದರು.ಅಕ್ರಮ ನಡೆಯುತ್ತಿದೆ: ಇದಕ್ಕೂ ಮುನ್ನ ಪ್ರತಿಭಟ ನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಮೋ ಚನಾ ಸಂಸ್ಥೆಯ ಜನಾರ್ದನ್‌, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿದೆ. ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಬಗ್ಗೆ ತಿಳಿದುಕೊಳ್ಳದೆ, ಜನ ರಿಗೂ ತಿಳಿಸದೆ, ಹಣ ನೀಡಿದವರಿಗೆ ಲಿಂಗ ಪತ್ತೆ ಮಾಡಿಕೊಡುವ ಕೆಲಸ ಅವ್ಯಾಹತವಾಗಿ ನಡೆಯು ತ್ತಿದೆ ಎಂದು ದೂರಿದರು.ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಅನಸೂ ಯಮ್ಮ ಮಾತನಾಡಿ, ‘ಇರುವ ಕಾನೂನು ಜಾರಿ ಗೊಳಿಸುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ. ಅಧಿ ಕಾರಿಗಳು ಮಾಡಬೇಕಾದ ಕೆಲಸವನ್ನು ಸಾರ್ವ ಜನಿಕರಾಗಿ ನಾವು ಮಾಡಿದ್ದೇವೆ. ಅಕ್ರಮದಲ್ಲಿ ತೊಡಗುವ ಸ್ಕ್ಯಾನಿಂಗ್‌ ಕೇಂದ್ರಗಳನ್ನು ಸಾಕ್ಷಿ ಸಮೇತ ಹಿಡಿದು ಕೊಟ್ಟಿದ್ದೇವೆ. ಆದರೆ ಅಧಿಕಾರಿಗಳು ಲಂಚದ ಆಮಿಷಕ್ಕೆ ಒಳಗಾಗಿ ಕರ್ತವ್ಯ ಪಾಲನೆ ಮರೆತಿದ್ದಾರೆ’ ಎಂದು ಕಿಡಿಕಾರಿದರು.ಈ ಸಂದರ್ಭದಲ್ಲಿ ಸ್ವರಾಜ್‌ ಸಂಘಟನಯೆ ಸುಕನ್ಯಾ, ನೀಲಯ್ಯ, ಚೈತನ್ಯ ಸಂಸ್ಥೆಯ ಶಿವಣ್ಣ, ಅಖಿಲ ಕರ್ನಾಟಕ ಭ್ರಷ್ಟಾಚಾರ ವಿರೋಧಿ ಸಂಘಟನೆಯ ರವಿ ಕುಮಾರ್‌ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry