ಸೋಮವಾರ, ಮಾರ್ಚ್ 8, 2021
25 °C
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ– ಹಿರಿಯ ವಕೀಲ ಶಾಂತಾರಾಮ ಶೆಟ್ಟಿ ಒತ್ತಾಯ

ತನಿಖೆಯ ಜವಾಬ್ದಾರಿ ಅಣ್ಣಾಮಲೈಗೆ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತನಿಖೆಯ ಜವಾಬ್ದಾರಿ ಅಣ್ಣಾಮಲೈಗೆ ವಹಿಸಿ

ಉಡುಪಿ: ಮಣಿಪಾಲ ಠಾಣೆಯ ಇನ್‌ ಸ್ಪೆಕ್ಟರ್‌ ಗಿರೀಶ್ ಅವರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ನೋಡಿದರೆ ಆರೋಪಿಗಳಿಗೆ ಅನುಕೂಲ ಮಾಡಲು ಪ್ರಯತ್ನಿಸಿರುವಂತಿದೆ. ಪ್ರಕರ ಣವೊಂದನ್ನು ಒಬ್ಬ ಪೊಲೀಸ್‌ ಅಧಿಕಾರಿ ಎಷ್ಟು ಹಾಳು ಮಾಡಬಹುದೋ ಅಷ್ಟು ಹಾಳು ಮಾಡಿದ್ದಾರೆ. ನಿಜವಾದ ಅಪ ರಾಧಿಗಳನ್ನು ಹುಡುಕುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಹಿರಿಯ ವಕೀಲ ಎಂ. ಶಾಂತಾರಾಮ ಶೆಟ್ಟಿ ಗಂಭೀರ ಆರೋಪ ಮಾಡಿದರು.ಈ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದರೆ ತನಿಖೆಯ ಜವಾಬ್ದಾರಿಯನ್ನು ಈ ಕೂಡಲೇ ದಕ್ಷ ಹಾಗೂ ಪರಿಣತ ಅಧಿಕಾರಿಗೆ ವಹಿಸ ಬೇಕು. ಈ ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವ ರನ್ನು ತನಿಖಾಧಿಕಾರಿಯಾಗಿ ನೇಮಿಸ ಬೇಕು. ಈಗಾಗಲೇ ತಡವಾಗಿದ್ದು ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಈಗ ತನಿಖಾಧಿಕಾರಿ ಆಗಿರುವ ಐಪಿಎಸ್ ಅಧಿಕಾರಿ ಸುಮನಾ ಅವರು ದಕ್ಷ ಅಧಿಕಾರಿ ಎಂಬ ಮಾತಿದೆ. ಆದರೆ, ಹೊಸಬರಾಗಿರುವ ಅವರಿಗೆ ತನಿಖೆಯಲ್ಲಿ ಅಷ್ಟೊಂದು ಪರಿಣತಿ ಇರುವುದಿಲ್ಲ ಎಂದು ಅವರು ಗುರುವಾರ ತಿಳಿಸಿದರು. ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರು ಬರೆದು ಕೊನೆಯಲ್ಲಿ ಇತರರು ಎಂದು ನಮೂದಿಸುವುದು ಸಾಮಾನ್ಯ.ಆದರೆ ಇದರಲ್ಲಿ ಹಾಗೆ ಮಾಡಿಲ್ಲ. ‘ಆರೋಪಿಗಳು ಕೃತ್ಯ ಎಸಗಿ ಸಾಕ್ಷ್ಯವನ್ನು ಸಂಪೂರ್ಣ ನಾಶ ಮಾಡಿದ್ದಾರೆ’ ಎಂದು ನಮೂದಿಸಿದ್ದಾರೆ. ಸಾಕ್ಷ್ಯಗಳು ಇಲ್ಲ ಎಂದು ಅವರೇ ತೀರ್ಪು ನೀಡಿದ್ದಾರೆ. ಅಲ್ಲಿಯೇ ಪ್ರಕರಣವನ್ನು ದುರ್ಬಲ ಗೊಳಿಸಿದ್ದಾರೆ. ಸಾಮಾನ್ಯವಾಗಿ ದೂರು ದಾರ ಅಧಿಕಾರಿಯೇ ತನಿಖೆ ನಡೆಸುವ ಪದ್ಧತಿ ಇಲ್ಲ.ಈ ಪ್ರಕರಣದಲ್ಲಿ ಗಿರೀಶ್ ಅವರೇ ತನಿಖೆಯನ್ನೂ ಮುಂದುವರಿಸಿ ದ್ದಾರೆ. ಈ ಬಗ್ಗೆಯೂ ತನಿಖೆಯಾಗ ಬೇಕು. ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಬೇಕು. ಈ ಪ್ರಕರ ಣದಲ್ಲಿ ಇನ್ನೂ ಹಲವು ಮಂದಿ ಶಾಮೀ ಲಾಗಿದ್ದು ಅವರನ್ನು ಪತ್ತೆ ಹಚ್ಚ  ಬೇಕು ಎಂದು ಅವರು ಆಗ್ರಹಿಸಿದರು.ಈ ಪ್ರಕರಣದಲ್ಲಿ ಭಾಸ್ಕರ್‌ ಶೆಟ್ಟಿ ಅವರ ತಾಯಿ ಗುಲಾಬಿ ಶೆಟ್ಟಿ ಅವರ ಪರವಾಗಿ ನಾವು ಪ್ರಾಸಿಕ್ಯೂಷನ್‌ಗೆ ಸಹಾಯ ಮಾಡಲಿದ್ದೇವೆ. ಕಾನೂನಿನ ಲ್ಲಿಯೂ ಇದಕ್ಕೆ ಅವಕಾಶ ಇದೆ. ಪತ್ನಿಯನ್ನು ಕೊಲೆ ಮಾಡಿ ಪತ್ನಿಯನ್ನು ಕೋಳಿ ಸುಡುವ ಭಟ್ಟಿಯಲ್ಲಿ ದಹಿಸಿದ ಪ್ರಕರಣದಲ್ಲಿಯೂ ಮೃತದೇಹ ಸಿಕ್ಕಿ ರಲಿಲ್ಲ. ಸಿಕ್ಕಿದ ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ವ್ಯಕ್ತಿ ಮೃತಪಟ್ಟಿ ರುವುದನ್ನು ಸಾಬೀತುಪಡಿಸಲಾಗಿತ್ತು. ಆ ಪ್ರಕರಣದ ಅಪರಾಧಿ ಕಾಂಗ್ರೆಸ್ ಮುಖಂಡನಿಗೆ ಶಿಕ್ಷೆಯಾಗಿತ್ತು ಎಂದು ಉದಾಹರಣೆ ನೀಡಿದರು.ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಶೆಟ್ಟಿ, ಸಹೋದರ ಸುರೇಂದ್ರ ಶೆಟ್ಟಿ, ವಕೀಲ ಶಶಿಕಾಂತ್ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಸಂತೋಷ್‌ ಶೆಟ್ಟಿ, ಶಿವಪ್ರಸಾದ್‌ ಶೆಟ್ಟಿ ಇದ್ದರು.ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನ

ಉಡುಪಿ:
ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ಆರೋಪಿಗಳಾದ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್‌ ಶೆಟ್ಟಿ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸುದ್ದಿ ದಿನಪತ್ರಿಕೆ ಹಾಗೂ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾದ ಕಾರಣ ಆರೋಪಿಗಳನ್ನು  ನೋಡಲು ಭಾರಿ ಸಂಖ್ಯೆಯಲ್ಲಿ ಜನರು ನ್ಯಾಯಾಲ ಯದ ಎದುರು ಜಮಾಯಿಸಿದ್ದರು.

ಇಡೀ ನ್ಯಾಯಾಲಯದ ಆವರಣ ಬೆಳಿಗ್ಗೆ 11 ಗಂಟೆ ಸುಮಾರಿಗೆ ಭರ್ತಿಯಾಗಿತ್ತು. ಆದರೆ, ಸಂಜೆ ಹಾಜರುಪಡಿಸುವ ಮಾಹಿತಿ ಸಿಕ್ಕ ಕಾರಣ 12 ಗಂಟೆ ಸುಮಾರಿಗೆ ಎಲ್ಲರೂ ಹೊರಟು ಹೋದರು.ಮತ್ತೆ ಮಧ್ಯಾಹ್ನ 3.30ರ ಸುಮಾರಿಗೆ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನ್ಯಾಯಾಲಯದ ಮುಂಭಾಗ ಇರುವ ಅಪಾರ್ಟ್‌ ಮೆಂಟ್‌ ಹಾಗೂ ಬಹುಮಹಡಿ ವಾಣಿಜ್ಯ ಸಂಕೀರ್ಣದ ಮುಂಭಾಗ ಹಾಗೂ ಮಹಡಿ ಮೇಲೆ ಸಹ ಜನರು ನಿಂತಿದ್ದರು. ಜನರನ್ನು ನಿಯಂತ್ರಿಸಲು ಉಡುಪಿ ನಗರ ಠಾಣೆಯ ಇನ್‌ಸ್ಪೆ ಕ್ಟರ್‌ ಜೈಶಂಕರ್‌ ಹಾಗೂ ಎಸ್‌ಐ ಅನಂತಪದ್ಮನಾಭ ಸಾಹಸಪಟ್ಟರು.ಸಿ.ಡಿ. ಮಾಡಿಸಿಕೊಳ್ಳಿ: ‘ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿ ತೊಂದರೆ ಕೊಡಬೇಡಿ. ಮಾಧ್ಯಮದವರು ಎಲ್ಲವನ್ನೂ ಚಿತ್ರೀಕರಿಸಿ ಅವರ ವಾಹಿನಿಗಳಲ್ಲಿ ಪ್ರಸಾರ ಮಾಡುತ್ತಾರೆ. ಅದರಲ್ಲೇ ಆರೋಪಿಗಳನ್ನು ನೋಡಿಕೊಳ್ಳಿ. ಅದು ಇಷ್ಟವಾದರೆ ಒಂದೊಂದು ಸಿ.ಡಿ. ಮಾಡಿಸಿ ಇಟ್ಟುಕೊಳ್ಳಿ’ ಎಂದು ಅನಂತಪದ್ಮನಾಭ ಅವರು ಹೇಳಿ ದಾಗ ಜನರು ಮಂದಸ್ಮಿತರಾದರು. ಆ ನಂತರ ಎಲ್ಲರನ್ನೂ ಹಿಂದಕ್ಕೆ ಸರಿಸಿ ಆರೋಪಿಗಳನ್ನು ಕರೆತರಲು ಜಾಗ ಮಾಡಿಕೊಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.