ತನಿಖೆ ಪೂರ್ಣಗೊಳಿಸಿದ ಸಿಬಿಐ

7
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ

ತನಿಖೆ ಪೂರ್ಣಗೊಳಿಸಿದ ಸಿಬಿಐ

Published:
Updated:

ನವದೆಹಲಿ (ಪಿಟಿಐ): ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಅವ್ಯವಹಾರಕ್ಕೆ ಸಂಬಂಧಿಸಿದ ಆರು ಪ್ರಕರಣಗಳ ತನಿಖೆಯನ್ನು ಸಿಬಿಐ ಈಗಾಗಲೇ ಪೂರ್ಣಗೊಳಿಸಿದೆ.ಸಿಬಿಐ ಸೋಮವಾರ ಸುಪ್ರೀಂ­ಕೋರ್ಟ್‌ಗೆ  ಸಲ್ಲಿಸಲಿರುವ  ಸ್ಥಿತಿಗತಿ ವರದಿಯಲ್ಲಿ ತನಿಖೆ ಪೂರ್ಣ­-ಗೊಂಡಿರುವುದನ್ನು ತಿಳಿಸಲಿದೆ.

ಯಾವ ಪ್ರಕರಣಗಳು ಪೂರ್ಣ­ಗೊಂಡಿವೆ ಎಂಬ ಮಾಹಿತಿಯನ್ನು ನೀಡಲು ಮೂಲಗಳು ನಿರಾಕರಿಸಿವೆ.ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಅವ್ಯವ­ಹಾರಗಳಿಗೆ ಸಂಬಂಧಿಸಿದಂತೆ ಹಿಂಡಾಲ್ಕೊ, ಎಎಂಆರ್‌ ಐರನ್‌ ಆ್ಯಂಡ್‌ ಸ್ಟೀಲ್‌,  ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌, ಜಾರ್ಖಂಡ್‌ ಇಸ್ಪಾಟ್‌ ಸೇರಿದಂತೆ  14 ಸಂಸ್ಥೆಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry