ಬುಧವಾರ, ಅಕ್ಟೋಬರ್ 23, 2019
27 °C

ತನಿಷ್ಕ್ ವಜ್ರಾಭರಣ

Published:
Updated:

ಚಿನ್ನಾಭರಣ ಉದ್ಯಮದ ತನಿಷ್ಕ್  ವಜ್ರಾಭರಣಗಳ ಮೇಲೆ ಶೇ 20ರಷ್ಟು ರಿಯಾಯಿತಿ ಪ್ರಕಟಿಸಿದೆ. 2 ಲಕ್ಷ ರೂ ಮತ್ತು ಹೆಚ್ಚಿನ ಆಭರಣ ಖರೀದಿಗೆ ಈ ಆಕರ್ಷಕ ರಿಯಾಯಿತಿ ಲಭ್ಯ.ಸಾಂಪ್ರದಾಯಿಕ ಮತ್ತು ಆಧುನಿಕ ಆಭರಣಗಳನ್ನು ಮಹಿಳೆಯರಿಗೆ ಸರಿಹೊಂದುವ ವಿನ್ಯಾಸದಲ್ಲಿ ನೀಡುವುದು ತನಿಷ್ಕ್‌ನ ವೈಶಿಷ್ಟ್ಯ. ದಿನಬಳಕೆಗೆ ಯೋಗ್ಯವಾಗುವ ವಜ್ರಾಭರಣಗಳಿಂದ ಹಿಡಿದು ನಾನಾ ನಮೂನೆ ಹಾಗೂ ವಿನ್ಯಾಸದ ಆಭರಣಗಳು ಇಲ್ಲಿವೆ. ವಜ್ರಾಭರಣ ಇಷ್ಟಪಡುವ ಮಹಿಳೆಯರಿಗೆ ಇಲ್ಲಿ ರೂ. 5 ಸಾವಿರದಿಂದ ಪ್ರಾರಂಭಗೊಳ್ಳುವ ಆಭರಣಗಳು ಲಭ್ಯ. ಈ ಕೊಡುಗೆ ಫೆಬ್ರುವರಿ 29ರವರೆಗೆ ಮಾತ್ರ.

`ತನಿಷ್ಕ್ ಅತ್ಯಾಧುನಿಕ ಆಭರಣ ವಿನ್ಯಾಸಗಳ ಮೇಲೆ ನಿರಂತರವಾಗಿ ರಿಯಾಯಿತಿ ನೀಡುತ್ತಿದೆ. ಚಿನ್ನದ ಬೆಲೆ ಏರಿಕೆ ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಅತ್ಯುತ್ತಮ ದರದಲ್ಲಿ ಆಭರಣ ಒದಗಿಸುವ ಉದ್ದೇಶ ನಮ್ಮದು. ವಜ್ರಾಭರಣಗಳ ಮೇಲೆ ಶೇ 20 ರಿಯಾಯಿತಿ ನೀಡುವುದು ಇಂತಹ ಯೋಜನೆಗಳಲ್ಲಿ ಒಂದು. ಮಹಿಳೆಯರಿಗೆ ಸಂತಸ ನೀಡುವ ಕೊಡುಗೆ ಸಹ ಇದಾಗಿದೆ~ ಎನ್ನುತ್ತಾರೆ ತನಿಷ್ಕ್ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)