ತಮಿಳುನಾಡಿಗೆ ನೀರು: ಪ್ರತಿಭಟನೆ ಜೋರು

7

ತಮಿಳುನಾಡಿಗೆ ನೀರು: ಪ್ರತಿಭಟನೆ ಜೋರು

Published:
Updated:
ತಮಿಳುನಾಡಿಗೆ ನೀರು: ಪ್ರತಿಭಟನೆ ಜೋರು

ಹಾಸನ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ಸಮರ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.ರಾಜ್ಯದಲ್ಲಿ ಬರ ಆವರಿಸಿದೆ.ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಈಗಿರುವ ನೀರಿನ ಸಂಗ್ರಹ ಮುಂದಿನ ದಿನಗಳಲ್ಲಿ ರಾಜ್ಯದ ಕಾವೇರಿ ನದಿ ಪಾತ್ರದ ಕೃಷಿ ಚಟುವಟಿಕೆಗೆ ಹಾಗೂ ಜನ ಜಾನುವಾರುಗಳಿಗೆ ಕುಡಿವ ನೀರು ಪೂರೈಕೆಗೂ ಕಷ್ಟಸಾಧ್ಯವಾಗಲಿದೆ.ಈ ನಡುವೆ ತಮಿಳುನಾಡಿಗೆ ಪ್ರತಿದಿನ 9 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿರುವ ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ದ್ರೋಹವೆಸಗಿದೆ ಎಂದು ಆರೋಪಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಸಾಗಿದ ಪ್ರತಿಭಟನಾ ಕಾರರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಣುಕು ಶವಯಾತ್ರೆ ನಡೆಸಿ ಎನ್.ಆರ್.ವೃತ್ತದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸಮರ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭರತ್‌ಗೌಡ, ಸಂದೇಶ್ ಗೌಡ, ರತೀಶ್‌ಗೌಡ ಹಾಗೂ ಶರತ್‌ಕುಮಾರ್ ಇದ್ದರು. ಅರಕಲಗೂಡು ವರದಿ: ಕಾವೇರಿ ಪ್ರಾಧಿಕಾರದ ಏಕ ಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿ ಕರವೇ ಕಾರ್ಯ ಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.ಪ್ರವಾಸಿ ಮಂದಿರ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾ ಕಾರರು ಅ.ನ.ಕೃ. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಳಿಕ ಕೆಲಕಾಲ ರಸ್ತೆ ತಡೆ ನಡೆಸಿದರು.ಬಳಿಕ ತಾಲ್ಲೂಕು ಕಚೇ ರಿಗೆ ತೆರಳಿ ತಹಶೀಲ್ದಾರ್ ಎಂ.ಆರ್. ಜಗದೀಶ್‌ರಿಗೆ ಮನವಿ ಸಲ್ಲಿಸಿದರು.ಕರವೇ ಮುಖಂಡರಾದ ಎಚ್.ಆರ್. ಭಾಸ್ಕರ್, ಎಂ.ಟಿ. ಕೃಷ್ಣೇಗೌಡ, ಮೀನಾ ಅರಸ್, ಎಂ.ಆರ್. ಯೋಗೇಶ್, ಎಂ.ಆರ್. ಕೃಷ್ಣೇಗೌಡ, ವರುಣ್, ಸುರೇಶ್, ತುಳಸಿರಾಮ್ ಹಾಜರಿದ್ದರು.ಚನ್ನರಾಯಪಟ್ಟಣ ವರದಿ: ದಂಡಿಗನಹಳ್ಳಿ ಹೋಬಳಿ ಜೆಡಿಎಸ್ ಯುವಘಟಕದ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಕೆ.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಕಾವೇರಿ ನದಿ ಪಾತ್ರದ ಜನತೆ ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿದ್ದಾರೆ.

ಹಾಗಾಗಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ಪ್ರಧಾನಿ ಡಾ. ಮನಮೋಹನಸಿಂಗ್ ಅವರು ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದರು. ತಮಿಳುನಾಡಿಗೆ ನೀರು ಹರಿಸುತ್ತಿರುವ ಕುರಿತು `ಅಣುಕು ಪ್ರದರ್ಶನ~ ನಡೆಸಿದರು.ಮುಖಂಡರಾದ ಕೃಪಾಶಂಕರ್, ನಂಜುಂಡೇಗೌಡ, ರಂಗಸ್ವಾಮಿ ನೇತೃತ್ವ ವಹಿಸಿದ್ದರು.

ಜಯಲಿತ ಪ್ರತಿಕೃತಿ ದಹನ: ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ನವೋದಯ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ಪ್ರತಿಕೃತಿ ದಹಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎನ್. ನವೀನ್‌ಕುಮಾರ್‌ಗೌಡ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry