ತಮಿಳುನಾಡು : ಕಾವೇರಿ ನದಿ ಪಾತ್ರದ ರೈತನ ಆತ್ಮಹತ್ಯೆ

7

ತಮಿಳುನಾಡು : ಕಾವೇರಿ ನದಿ ಪಾತ್ರದ ರೈತನ ಆತ್ಮಹತ್ಯೆ

Published:
Updated:

ಚೆನ್ನೈ: ಕಾವೇರಿ ನದಿ ಪಾತ್ರದ ತಿರುವೂರು ಜಿಲ್ಲೆಯ ರೈತನೊಬ್ಬ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ 15 ದಿನಗಳಲ್ಲಿ ಸಾವಿಗೆ ಶರಣಾದ ರೈತರ ಸಂಖ್ಯೆ ಐದಕ್ಕೆ ಏರಿದೆ. ಅಂದಕರೈ ಗ್ರಾಮದ ರೈತ ಅಬ್ದುಲ್ ರಹೀಂ (55) ತನ್ನ ಹೊಲದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.`ಬತ್ತದ ಬೆಳೆಗೆ ನೀರಿಲ್ಲದ ಕಾರಣಕ್ಕೆ ಈತ ಖಿನ್ನನಾಗಿದ್ದ. ಪಂಪ್‌ಸೆಟ್ ಖರೀದಿಗಾಗಿ ಸಾಲವನ್ನೂ ಮಾಡಿಕೊಂಡಿದ್ದ. ತನಿಖೆಯ ನಂತರವಷ್ಟೇ ವಸ್ತು ಸ್ಥಿತಿ ಗೊತ್ತಾಗುತ್ತದೆ' ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry