ತಮಿಳುನಾಡು ಸಚಿವ ಕರುಪ್ಪುಸಾಮಿ

7

ತಮಿಳುನಾಡು ಸಚಿವ ಕರುಪ್ಪುಸಾಮಿ

Published:
Updated:

ಚೆನ್ನೈ, (ಪಿಟಿಐ): ತಮಿಳುನಾಡು ಸಚಿವ ಸಿ. ಕರುಪ್ಪುಸಾಮಿ (57) ಶನಿವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.ಮೃತರಿಗೆ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಯುವಜನ ಮತ್ತು ಕ್ರೀಡಾ ಕಲ್ಯಾಣ ಸಚಿವರಾಗಿದ್ದ ಕರುಪ್ಪುಸಾಮಿ, ಆಸ್ಪತ್ರೆ ಸೇರಿದ ಬಳಿಕ ಆ ಖಾತೆಯನ್ನು ಶಿಕ್ಷಣ ಸಚಿವ ಸಿ.ವಿ. ಷಣ್ಮುಗಂ ಅವರಿಗೆ ವಹಿಸಲಾಗಿತ್ತು. ಪ್ರಸ್ತುತ ಖಾತೆ ರಹಿತ ಸಚಿವರಾಗಿದ್ದ ಕರುಪ್ಪುಸಾಮಿ ಎಐಎಡಿಎಂಕೆ ಸಂಘಟನಾ ಕಾರ್ಯದರ್ಶಿಯೂ ಆಗಿದ್ದರು. ಅವರು ಶಂಕರಂಕೋವಿಲ್ ಮೀಸಲು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry