ತಮಿಳುನಾಡು: ಸೌರಶಕ್ತಿ ನೀತಿ ಜಾರಿ

7

ತಮಿಳುನಾಡು: ಸೌರಶಕ್ತಿ ನೀತಿ ಜಾರಿ

Published:
Updated:

ಚೆನ್ನೈ (ಪಿಟಿಐ): ಸೌರಶಕ್ತಿ ಬಳಸಿಕೊಂಡು ಮುಂದಿನ ಮೂರು ವರ್ಷದಲ್ಲಿ 3000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ನೂತನ `ಸೌರಶಕ್ತಿ ನೀತಿ~ಯನ್ನು ತಮಿಳುನಾಡು ಸರ್ಕಾರ ಶನಿವಾರ ರೂಪಿಸಿದೆ.ರಾಜ್ಯದಲ್ಲಿ ವರ್ಷದ 300 ದಿನ  ಬೇಸಿಗೆ ಇರುತ್ತದೆ. ಹಾಗಾಗಿ ಈ ಅವಧಿಯ ಬಿಸಿಲನ್ನೇ ಬಂಡವಾಳನ್ನಾಗಿಸಿಕೊಂಡು ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಸರ್ಕಾರ, `ತಮಿಳುನಾಡು ಸೌರಶಕ್ತಿ ನೀತಿ- 2012~ ಎಂಬ ಹೊಸ ನೀತಿ ಜಾರಿಗೆ ತರುತ್ತಿದೆ.ಹೊಸ ನೀತಿಯನ್ವಯ, ಅಲ್ಪ ಪ್ರಮಾಣದ ವಿದ್ಯುತ್ ಬಳಸುವ ಗೃಹ ಬಳಕೆ ಮಗ್ಗ, ಕೃಷಿ, ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿ, ವಿಶೇಷ ಆರ್ಥಿಕ ವಲಯ, ಮಾಹಿತಿ ತಂತ್ರಜ್ಞಾನ ಪಾರ್ಕ್ ಸೇರಿದಂತೆ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರು ಶೇ 6ರಷ್ಟು ಸೌರ ವಿದ್ಯುತ್‌ನ್ನು ಕಡ್ಡಾಯವಾಗಿ ಖರೀದಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry