ಬುಧವಾರ, ನವೆಂಬರ್ 20, 2019
21 °C

ತಮಿಳು ಚಿತ್ರನಟಿ ಅಂಜಲಿ ಪತ್ತೆ

Published:
Updated:

ಚೆನ್ನೈ (ಪಿಟಿಐ): ನಾಪತ್ತೆಯಾಗಿದ್ದ ತಮಿಳು ಚಿತ್ರನಟಿ ಅಂಜಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸತತ ಚಿತ್ರಿಕರಣ ಹಾಗೂ ಕೆಲಸದ ಒತ್ತಡದಿಂದ ವಿಶ್ರಾಂತಿ ಪಡೆಯಲು ಮುಂಬೈಗೆ ತೆರಳಿರುವುದಾಗಿ ಅಂಜಲಿ ಹೇಳಿಕೆ ನೀಡಿದ್ದಾರೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.ಅಂಜಲಿಯ ಚಿಕ್ಕಮ್ಮ ಹಾಗೂ ತಮಿಳು ನಿರ್ದೇಶಕರ ಕಿರುಕುಳದಿಂದಾಗಿಯೇ ಬೇಸತ್ತು ಅಂಜಲಿ ನಾಪತ್ತೆಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿತ್ತು.ಕಳೆದ ಸೋಮವಾರ ಅಂಜಲಿ ನಾಪತ್ತೆಯಾಗಿದ್ದರು.  ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಹೋಟೆಲ್ ರೂಂ ನಿಂದ ಅಂಜಲಿ ನಾಪತ್ತೆಯಾಗಿದ್ದರು.

ಪ್ರತಿಕ್ರಿಯಿಸಿ (+)