ತಮಿಳು ಚಿತ್ರನಟಿ ಎಸ್.ಎನ್.ಲಕ್ಷ್ಮಿ ನಿಧನ,

7

ತಮಿಳು ಚಿತ್ರನಟಿ ಎಸ್.ಎನ್.ಲಕ್ಷ್ಮಿ ನಿಧನ,

Published:
Updated:

ಚೆನ್ನೈ: ತಮಿಳು ಚಿತ್ರರಂಗದ  ಹಿರಿಯ ನಟಿ ಎಸ್.ಎನ್. ಲಕ್ಷ್ಮಿ ಮಂಗಳವಾರ ರಾತ್ರಿ ಇಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 85 ವರ್ಷವಾಗಿತ್ತು.ಅಮ್ಮನ ಪಾತ್ರದಿಂದ ಖ್ಯಾತಿ ಪಡೆದಿದ್ದ ಲಕ್ಷ್ಮಿ ಅವರನ್ನು ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 1 ಗಂಟೆಗೆ ಅವರು ಕೊನೆಯುಸಿರೆಳೆದರು.ಸಾಲಿಗ್ರಾಮಮ್‌ನಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದ ನಂತರ ಅವರ ಸ್ವಂತ ಜಿಲ್ಲೆಯಾದ ವಿರುಧುನಗರಕ್ಕೆ ಒಯ್ದು ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಲಕ್ಷ್ಮಿ ಅವರು ತಮಿಳು, ತೆಲುಗು ಮತ್ತು ಇತರ ಪ್ರಾದೇಶಿಕ ಭಾಷೆಗಳ ಚಿತ್ರಗಳಲ್ಲೂ ನಟಿಸಿದ್ದರು ಹಾಗೂ ಕಿರು ತೆರೆಯಲ್ಲೂ ಜನಪ್ರಿಯರಾಗಿದ್ದರು.13ನೇ ವಯಸ್ಸಿಗೇ ನಟನೆ ಆರಂಭಿಸಿದ್ದ ಅವರು ಸುಮಾರು 1500 ಚಿತ್ರಗಳು ಮತ್ತು ಆರು ಸಾವಿರ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು.ಲಕ್ಷ್ಮಿ ನಿಧನದಿಂದ ತಮಿಳು ಚಿತ್ರರಂಗ ಬಡವಾಗಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ಸಂತಾಪ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry