ಶನಿವಾರ, ಮೇ 15, 2021
24 °C

ತಮ್ಮಡಹಳ್ಳಿ ಶಾಲಾ ಮಕ್ಕಳಿಗೆ ಜೀವ ವಿಮಾ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ರೋಟರಿ ಸಂಸ್ಥೆಯಿಂದ ತಾಲ್ಲೂಕಿನ ತಮ್ಮಡಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 242ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜೀವ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.



ರೋಟರಿಯ ಈ ಸೇವಾ ಕಾರ್ಯಕ್ಕೆ ಆಕರ್ಷಿತರಾಗಿ ಗ್ರಾಮದ ರೇವಣ್ಣ ಅವರು ತಮ್ಮ ಜಮೀನನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ. ರೋಟರಿ ಸಂಸ್ಥೆ ಅಧ್ಯಕ್ಷ ಹರೀಶ್ ನೇತೃತ್ವದ ತಂಡ, ಎಲ್ಲ ವಿದ್ಯಾರ್ಥಿಗಳನ್ನು ಜೀವ ವಿಮಾ ಸೌಲಭ್ಯಕ್ಕೆ ನೋಂದಣಿ ಮಾಡಿಸಿತ್ತು. ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ರೋಟರಿಯ ಸೇವಾ ಕಾರ್ಯಕ್ಕೆ ಅಭಿನಂದಿಸಿದರು.



ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ದಾನಿಗಳ ನೆರವು ಪಡೆದು ಸಮವಸ್ತ್ರ, ಗುರುತಿನ ಚೀಟಿ, ಲೈಬ್ರರಿ ರ‌್ಯಾಕ್, ಸೌಂಡ್ ಸಿಸ್ಟಂ, ಗೋಡೆಬರಹ, ವೇದಿಕೆ ನಿರ್ಮಾಣ, ಡಿವಿಡಿ ಪ್ಲೇಯರ್, ನೋಟ್‌ಬುಕ್ ನೀಡಲಾಗಿದೆ.



ರೋಟರಿಯ ಮಾಜಿ ಸಹಾಯಕ ಗೌರ‌್ನರ್ ಶ್ರೀನಿವಾಸಶೆಟ್ಟಿ ಮಾತನಾಡಿ, `ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಮತ್ತು ಗ್ರಾಮಸ್ಥರು ಒಗ್ಗೂಡಿ ಸೇವೆ ಸಲ್ಲಿಸಬೇಕು. ಮಾದರಿ ಶಾಲೆಯಾಗಿ ರೂಪಿಸಬೇಕು~ ಎಂದು ಸಲಹೆ ನೀಡಿದರು.



ಗ್ರಾಮದಲ್ಲಿ ರೋಟರಿಯಿಂದ ಹೃದಯ, ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ, ಸೀಳುತುಟಿ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುವುದು. ಜತೆಗೆ, ರೇಷ್ಮೆ ಬೆಳೆ ಬಗ್ಗೆ ಮಾಹಿತಿ ನೀಡುವ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.



ರೋಟರಿಯ ವಲಯ ಪ್ರತಿನಿಧಿ ಶಾಂತಮಲ್ಲಪ್ಪ, ಕಾರ್ಯದರ್ಶಿ ರೇಣುಕಾ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಮಣ್ಯ, ಮುಖಂಡರಾದ ಸುಬ್ಬನಾಯಕ, ಶಿವ ಕುಮಾರ್, ಗ್ರಾ.ಪಂ. ಸದಸ್ಯರಾದ ಟಿ.ಎಸ್. ಬಸವಣ್ಣ, ಕೆಂಪನಂಜಪ್ಪ, ಗುರುಸಿದ್ದ ಶೆಟ್ಟಿ, ಮಹದೇವಯ್ಯ, ನಿವೃತ್ತ ಶಿಕ್ಷಕ ಟಿ.ಎಸ್. ಬಸವಣ್ಣ, ಚೆನ್ನಪ್ಪ, ಮುಖ್ಯಶಿಕ್ಷಕ ರಾಧಾಕೃಷ್ಣ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.