ಬುಧವಾರ, ನವೆಂಬರ್ 20, 2019
20 °C

ತಮ್ಮ ಕಚೇರಿಯಲ್ಲಿ ಕಳ್ಳಕಿವಿ: ಪ್ರಣವ್ ನಿರಾಕರಣೆ

Published:
Updated:

ನವದೆಹಲಿ (ಪಿಟಿಐ): ತಮ್ಮ ಕಚೇರಿಯಲ್ಲಿ ಗುಪ್ತ ಧ್ವನಿಗ್ರಾಹಕವನ್ನು ಇಡಲಾಗಿದೆ ಎಂಬ ವರದಿಗಳ ಬಗ್ಗೆ ಜಾಗೃತಾ ಸಂಸ್ಥೆಗಳು ತನಿಖೆ ನಡೆಸಿದ್ದು ತನಿಖೆಯ ವೇಳೆಯಲ್ಲಿ ಅಂತಹ ಯಾವುದೇ ಉಪಕರಣಗಳೂ ಪತ್ತೆಯಾಗಿಲ್ಲ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಂಗಳವಾರ ಇಲ್ಲಿ ಹೇಳಿದರು.ತಮ್ಮ ಕಚೇರಿಯಲ್ಲಿನ ಸಂಭಾವ್ಯ ಭದ್ರತಾ ಲೋಪ ಕುರಿತ ವರದಿಗಳ ಬಗ್ಗೆ ಪ್ರಸ್ತಾಪಿಸಿದ ಅವರು ~ನನ್ನ ಕಚೇರಿಯಲ್ಲಿ ಗುಪ್ತ ಧ್ವನಿಗ್ರಾಹಕವನ್ನು ಇರಿಸಲಾಗಿದೆ ಎಂಬ ವರದಿಗಳ ಬಗ್ಗೆ ಜಾಗೃತಾ ಸಂಸ್ಥೆಗಳು ತನಿಖೆ ನಡೆಸಿದ್ದು, ಅವುಗಳಿಗೆ ಅಂತಹ ಯಾವುದೇ ಉಪಕರಣ ಲಭಿಸಿಲ್ಲ~ ಎಂದು ನುಡಿದರು.ವರದಿಗಳ ಪ್ರಕಾರ ಹಣಕಾಸು ಸಚಿವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಳೆದ ವರ್ಷ ಪತ್ರ ಬರೆದು ತಮ್ಮ ಕಚೇರಿಯಲ್ಲಿನ ಗಂಬೀರ ಭದ್ರತಾ ಲೋಪದ ಬಗ್ಗೆ ರಹಸ್ಯ ತನಿಖೆ ನಡೆಸುವಂತೆ ಕೋರಿದ್ದರು ಎಂದು ಹೇಳಲಾಗಿತ್ತು.

 

ಪ್ರತಿಕ್ರಿಯಿಸಿ (+)