ತರಂಗಾಂತರ ಮರು ಹಂಚಿಕೆಗೆ ಚಿಂತನೆ

7

ತರಂಗಾಂತರ ಮರು ಹಂಚಿಕೆಗೆ ಚಿಂತನೆ

Published:
Updated:

ನವದೆಹಲಿ (ಪಿಟಿಐ): `ಜಿಎಸ್‌ಎಂ~ ತಂತ್ರಜ್ಞಾನ ಆಧರಿಸಿದ ದೂರವಾಣಿ ಸೇವಾ ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಮಧ್ಯೆಯೂ, 900 ಮೆಗಾಹರ್ಟ್ಸ್ ಬ್ಯಾಂಡ್‌ನ ತರಂಗಾಂತರ ಮರುಹಂಚಿಕೆ ಕುರಿತು ಚಿಂತಿಸುತ್ತಿರುವುದಾಗಿ ದೂರವಾಣಿ ಇಲಾಖೆ ಹೇಳಿದೆ.ತರಂಗಾಂತರ ಪಡೆದಿರುವ ಸೇವಾ ಸಂಸ್ಥೆಗಳು, 2014ರಲ್ಲಿ ಪರವಾನಗಿ ನವೀಕರಿಸಿಕೊಳ್ಳುವ ಸಂದರ್ಭದಲ್ಲಿ ತಾವು 2001ರಿಂದ ಪಡೆದಿರುವ 900 ಮೆಗಾಹರ್ಟ್ಸ್‌ನ ಎಲ್ಲ ತರಂಗಾಂತರ ಮರಳಿ ದೂರವಾಣಿ ಇಲಾಖೆಗೆ ಒಪ್ಪಿಸುವಂತೆ ದೂರವಾಣಿ ಇಲಾಖೆ ಕಾರ್ಯದರ್ಶಿ ಆರ್.ಚಂದ್ರಶೇಖರ್  ಹೇಳಿದ್ದಾರೆ. 1800 ಮೆಗಾಹರ್ಟ್ಸ್‌ಗೆ ತರಂಗಾಂತರ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕೆಂಬ ಸೂಚನೆ ಈಗಾಗಲೇ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry