ಶನಿವಾರ, ಮೇ 28, 2022
26 °C

ತರಗೆಲೆ ಕಣಜ

ಪ.ರಾಮಕೃಷ್ಣ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ದನ ಸಾಕಿ ಕೃಷಿ ಮಾಡುವ ರೈತರು ಹೆಚ್ಚಾಗಿ ಕೊಟ್ಟಿಗೆಯಲ್ಲೇ ಸೆಗಣಿ ಗೊಬ್ಬರ ತಯಾರಿಸುತ್ತಾರೆ. ಬಿಸಿಲು ಕಾಲದಲ್ಲಿ ಗುಡ್ಡದ ಪೊದೆಗಳಲ್ಲಿರುವ ಎಲೆಗಳು ಅಥವಾ ಮರದ ಕೊಂಬೆಯ ಎಲೆಗಳನ್ನು ಹರಡುತ್ತಾರೆ. ಇವು ದನಗಳ ಕಾಲ್ತುಳಿತಕ್ಕೆ ಸಿಕ್ಕಿ ಪುಡಿಯಾಗಿ ಗಂಜಲ, ಸೆಗಣಿಯೊಂದಿಗೆ ಬೆರೆತು ಕಳಿತು ಗೊಬ್ಬರವಾಗುತ್ತವೆ.ಇದನ್ನು ಬಳಸಿದರೆ ಹಸಿರು ಹೊನ್ನು ಗರಿಗೆದರಿ ಬೆಳೆಯುತ್ತದೆ. ಆದರೆ ಜಡಿ ಮಳೆ ಬರುವಾಗ ಇಂಥ ಹಸಿರೆಲೆಯನ್ನು ಕತ್ತರಿಸಿ ಹೊತ್ತು ತರುವುದು ರೈತರಿಗೆ ಪ್ರಯಾಸದ ಕೆಲಸ.ಅದಕ್ಕಾಗಿ ಬೇಸಿಗೆಯಲ್ಲೇ ಮುಂಜಾಗ್ರತೆ ವಹಿಸುತ್ತಾರೆ. ಮಳೆ ಬರುವ ಮೊದಲೇ ಮರಗಳಿಂದ ಉದುರಿದ ತರಗೆಲೆಗಳನ್ನು ಪೊರಕೆಯಿಂದ ಗುಡಿಸಿ ಬಿಳಲುಗಳಿಂದ ಹೆಣೆದ ಕುರ್ಕಿಲಿ ಎಂಬ ಬುಟ್ಟಿಗಳಲ್ಲಿ ತುಂಬಿಸಿ ಕೊಟ್ಟಿಗೆಯ ಪಕ್ಕದ ಖಾಲಿ ಪ್ರದೇಶದಲ್ಲಿ ರಾಶಿ ಹಾಕುತ್ತಾರೆ. ಇದನ್ನು ಮಳೆಗಾಲದಲ್ಲಿ ಕೊಟ್ಟಿಗೆಗೆ ಹರಡಿ ಗೊಬ್ಬರ ತಯಾರಿಸಲು ಬಳಸುತ್ತಾರೆ.ಸುಮ್ಮನೆ ರಾಶಿ ಹಾಕಿದರೆ ಮಳೆ ಬಿದ್ದಾಕ್ಷಣ ಕೊಳೆತು ಹೋಗುತ್ತದೆ. ಅದಕ್ಕಾಗಿ ಬೆಳ್ತಂಗಡಿ ತಾಲೂಕಿನ ಖಂಡಿಗದ ಪದ್ಮ ನಾಯ್ಕರು ಉಡುಪಿಯ ಕಟ್ಟಿಗೆ ತೇರಿನ ಆಕತಿಯಲ್ಲಿ ತರಗೆಲೆಯನ್ನು ತುಪ್ಪೆಯಾಕಾರದಲ್ಲಿ ಜೋಡಿಸಿ ಕಣಜ ಕಟ್ಟುತ್ತಾರೆ.ಇದನ್ನು ಜೋಡಿಸುವ ವೈಖರಿಯಿಂದಾಗಿ ಎಂಥ ಮಳೆ ಬಂದರೂ ನೀರು ಒಳಗೆ ನುಗ್ಗುವುದಿಲ್ಲ. ತರಗೆಲೆ ಬೆಚ್ಚಗೆ ಉಳಿದು ಮಳೆಗಾಲದ ಮೂರು ತಿಂಗಳಲ್ಲಿ ನಿತ್ಯವೂ ಬೇಕಾದಷ್ಟೇ ತರಗೆಲೆ ತಂದು ಕೊಟ್ಟಿಗೆಗೆ ಹಾಸಲು ಸಿಗುತ್ತದೆ. ಇದರಿಂದ ಉತ್ತಮ ಗೊಬ್ಬರವೂ ತಯಾರಾಗುತ್ತದೆ. ಪದ್ಮನಾಯ್ಕರ ಈ ಉಪಾಯ ಇತರ ರೈತರಿಗೂ ಈಗ ಮಾದರಿಯೆನಿಸಿದೆ. ಮಾಹಿತಿಗೆ: 94833 52306.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.