ತರಬೇತಿಗೆ ಕಬಡ್ಡಿ ಅಂಕಣ ಸಜ್ಜು

7

ತರಬೇತಿಗೆ ಕಬಡ್ಡಿ ಅಂಕಣ ಸಜ್ಜು

Published:
Updated:

ಚನ್ನರಾಯಪಟ್ಟಣ:  ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ‘ವಿದ್ಯಾರ್ಥಿ ಕ್ರೀಡಾಪಟುಗಳ ಗುಣಮಟ್ಟವರ್ಧನೆ’ ಯೋಜನೆಯಡಿ ಫೆಬ್ರುವರಿ 3ರಿಂದ ಮಾರ್ಚ್ 3ವರೆಗೆ ಕಬಡ್ಡಿ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಇದಕ್ಕಾಗಿ ಅಂಕಣ ಸಿದ್ಧಪಡಿಸುವ ಕಾರ್ಯ ಸೋಮವಾರದಿಂದ ಆರಂಭವಾಗಿದೆ.ತಾಲ್ಲೂಕಿನ ಪದವಿ ಕಾಲೇಜಿನ ಕಬಡ್ಡಿ ಕ್ರೀಡಾಪಟುಗಳ ಆಯ್ಕೆ ಜನವರಿ 31 ರಂದು ಪಟ್ಟಣದಲ್ಲಿ ನಡೆಯಲಿದೆ ಎಂದು ನೋಡೆಲ್ ಅಧಿಕಾರಿ ಸಿ. ದೇವರಸೇಗೌಡ ತಿಳಿಸಿದ್ದಾರೆ.ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯ್ಕೆ ಟ್ರಯಲ್ಸ್ ನಡೆಯಲಿದ್ದು, 25 ಮಂದಿಯನ್ನು ಆಯ್ಕೆ ಮಾಡಿ ಒಂದು ತಿಂಗಳ ಕಾಲ ಪಟ್ಟಣದಲ್ಲಿ ತರಬೇತಿ ನೀಡಲಾಗುವುದು. ಆಯ್ಕೆಯಾದ 25 ಶಿಬಿರಾರ್ಥಿಗಳಿಗೆ ನಿತ್ಯ ತಲಾ 30 ರೂ. ಪ್ರೋತ್ಸಾಹ ಧನ ನೀಡಲಾಗುವುದು.ಆಯ್ಕೆ ಟ್ರಯಲ್ಸ್ ಜ. 31 ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ.ಆಸಕ್ತಿ ಇರುವ ಆಟಗಾರರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ನೋಡೆಲ್ ಅಧಿಕಾರಿ ಸೋಮವಾರ ತಿಳಿಸಿದರು.ಹಿತರಕ್ಷಣಾ ಸಮಿತಿ ಸಭೆ: ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ/ವರ್ಗದ ಹಿತರಕ್ಷಣಾ ಸಮಿತಿ ಸಭೆ ಜ. 31ರಂದು ಮಿನಿವಿಧಾನ ಸೌಧದಲ್ಲಿ ಜರುಗಲಿದೆ. ಆದುದರಿಂದ ತಾಲ್ಲೂಕಿನ ಅಧಿಕಾರಿಗಳು, ಹಿತರಕ್ಷಣಾ ಸಮಿತಿಯ ಸದಸ್ಯರು, ವಿವಿಧ ಸಂಘ, ಸಂಸ್ಥೆಗಳ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿ ಅಗತ್ಯ ಸಲಹೆ ನೀಡಬೇಕೆಂದು ತಹಶೀಲ್ದಾರ್ ಬಿ.ಎನ್.ವರಪ್ರಸಾದರೆಡ್ಡಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry