ಸೋಮವಾರ, ಸೆಪ್ಟೆಂಬರ್ 16, 2019
22 °C

ತರಬೇತಿಗೆ ರೂ.13.91 ಕೋಟಿ ಬಿಡುಗಡೆ: ಮಾಕನ್

Published:
Updated:

ನವದೆಹಲಿ (ಪಿಟಿಐ): ದೇಶದ ಕ್ರೀಡಾಪಟುಗಳಿಗೆ ತರಬೇತಿ ಉದ್ದೇಶಕ್ಕಾಗಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರೂ. 13.91 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಮಂಗಳವಾರ ಲೋಕ ಸಭೆಯಲ್ಲಿ ತಿಳಿಸಿದರು.ಟೆನಿಸ್ ತಾರೆಗಳಾದ ಲಿಯಾಂಡರ್ ಪೇಸ್, ಭೂಪತಿ, ಸೋಮದೇವ್, ರೋಹನ್ ಬೋಪಣ್ಣ ಹಾಗೂ ಸಾನಿಯಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಆರ್ಥಿಕ ನೆರವು ಪಡೆದುಕೊಂಡಿದ್ದಾರೆಂದು ಅವರು ಹೇಳಿದರು.ಪ್ರಭಾವಿ ಶೂಟರ್‌ಗಳು, ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಮಾತ್ರವಲ್ಲ ಜಿಮ್ನಾಸ್ಟಿಕ್ಸ್ ಸ್ಪರ್ಧಿಗಳಿಗೂ ಸರ್ಕಾರವು ಉನ್ನತ ಮಟ್ಟದ ತರಬೇತಿ ಸಿಗುವಂತೆ ವ್ಯವಸ್ಥೆ ಮಾಡಿದೆ ಎಂದು ನುಡಿದರು.

Post Comments (+)