ತರಬೇತಿ ವಿಮಾನಗಳ ಡಿಕ್ಕಿ: ನಾಲ್ವರು ಪೈಲಟ್‌ಗಳ ಸಾವು

7

ತರಬೇತಿ ವಿಮಾನಗಳ ಡಿಕ್ಕಿ: ನಾಲ್ವರು ಪೈಲಟ್‌ಗಳ ಸಾವು

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ವಾಯುಪಡೆಗೆ ಸೇರಿದ್ದ ಎರಡು ಯುದ್ಧ ವಿಮಾನಗಳು ಗುರುವಾರ ತರಬೇತಿಯ ವೇಳೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಪೈಲಟ್‌ಗಳು ಮೃತಪಟ್ಟಿದ್ದು, ಐದು ಜನ ಗಾಯಗೊಂಡಿದ್ದಾರೆ.ಪೆಶಾವರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ನೌಷೇರಾ ಜಿಲ್ಲೆಯ ರಾಶಕೈ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.  ಅಪಘಾತಕ್ಕೀಡಾದ ನಂತರ ಹೊತ್ತಿ ಉರಿದ ವಿಮಾನಗಳ ಅವಶೇಷಗಳು ಜನವಸತಿ ಪ್ರದೇಶದಲ್ಲಿ ಬಿದ್ದ ಕಾರಣ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ.  ಮೂವರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ  ಎಂದು ಅಧಿಕಾರಿಗಳು ಹೇಳಿದ್ದಾರೆ.ರಿಸಾಲ್ಪುರದ ಪಾಕಿಸ್ತಾನ ವಾಯುಪಡೆ ಅಕಾಡೆಮಿ ಸಮೀಪ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಈ ಅಪಘಾತ ನಡೆದಿದೆ.ಇದು ಪಾಕಿಸ್ತಾನದಲ್ಲಿ ಈ ವಾರದಲ್ಲಿ ನಡೆದ ಎರಡನೇ ವಿಮಾನ ಅಪಘಾತ. ಮೇ 11 ರಂದು ಕರಾಚಿ ಬಳಿ ಪಾಕ್ ವಾಯುಪಡೆಯ ಜೆಟ್ ವಿಮಾನವೊಂದು ಅಪಘಾತಕ್ಕೀಡಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry