ತರಬೇತಿ ವೇಳೆ ಸ್ಫೋಟ: ಯೋಧಸಾವು

7

ತರಬೇತಿ ವೇಳೆ ಸ್ಫೋಟ: ಯೋಧಸಾವು

Published:
Updated:

ಬೆಳಗಾವಿ: ತಾಲ್ಲೂಕಿನ ಬಾಮನವಾಡಿ ಫೈರ್ ರೇಂಜ್‌ನಲ್ಲಿ ತರಬೇತಿ ಸಮಯದಲ್ಲಿ ಸ್ಫೋಟಕ ವಸ್ತುವೊಂದು ಸ್ಫೋಟಗೊಂಡು ಸೇನೆಯ ಜ್ಯೂನಿಯರ್ ಲೀಡರ್ ವಿಂಗ್‌ನ ಯೋಧನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಪುಣೆಯ ಶಿರೂರಿನ ಸೋಮನಾಥ ಖೈರೆ (28) ಎಂಬುವವರು ಡಿಫೆನ್ಸ್ ಕಮಾಂಡ್‌ನ ಜೈಲ್ ವಿಂಗ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಬಾಮನವಾಡಿ ಫೈರ್ ರೇಂಜ್‌ನಲ್ಲಿ `ಸೇಫ್ ಚಾರ್ಟ್ ಬ್ಲಾಸ್ಟ್~ ತರಬೇತಿ ಸಂದರ್ಭದಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಸ್ಫೋಟಗೊಂಡಿದ್ದರಿಂದ ಸೋಮನಾಥ ತೀವ್ರವಾಗಿ ಗಾಯಗೊಂಡರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry