ಶುಕ್ರವಾರ, ನವೆಂಬರ್ 15, 2019
26 °C

ತರಬೇತಿ ಶಿಬಿರಕ್ಕೆ ತೆರೆ

Published:
Updated:

ಬೆಂಗಳೂರು: ಮಹೀಂದ್ರಾ ಯೂತ್ ಫುಟ್‌ಬಾಲ್ ಚಾಲೆಂಜ್ ಟೂರ್ನಿಯ ಅಂಗವಾಗಿ ಬೆಂಗಳೂರು ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ನಾಲ್ಕು ದಿನಗಳ ತರಬೇತಿ ಶಿಬಿರ ಮಂಗಳವಾರ ಕೊನೆಗೊಂಡಿತು.ಸ್ಕಾಟ್ಲೆಂಡ್‌ನ ಸೆಲ್ಟಿಕ್ ಫುಟ್‌ಬಾಲ್ ಕ್ಲಬ್‌ನ ಕೋಚ್‌ಗಳಾದ ಟಾಮ್ ಮೆಕೇ, ಮಾರ್ಕ್ ಟೊಬಿನ್, ಮೈಕಲ್ ಮೆಕೆಲ್ರಾಯ್ ಮತ್ತು ಗ್ರೆಗ್ ರಾಬರ್ಟ್ಸನ್ ಅವರು ಶಿಬಿರದಲ್ಲಿ ಯುವ ಆಟಗಾರರಿಗೆ ತರಬೇತಿ ನೀಡಿದರು.ಮಹೀಂದ್ರಾ ಯೂತ್ ಫುಟ್‌ಬಾಲ್ ಚಾಲೆಂಜ್‌ನ ಅಂತರ ನಗರ ಟೂರ್ನಿಯಲ್ಲಿ ಬೆಂಗಳೂರು ಒಳಗೊಂಡಂತೆ ಆರು ನಗರಗಳ ತಂಡಗಳು ಪೈಪೋಟಿ ನಡೆಸಲಿವೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ 14 ವರ್ಷ ವಯಸ್ಸಿನೊಳಗಿನ ಒಟ್ಟು 108 ಆಟಗಾರರು ಶಿಬಿರದ ಪ್ರಯೋಜನ ಪಡೆದರು.

ಪ್ರತಿಕ್ರಿಯಿಸಿ (+)