ಗುರುವಾರ , ಜೂನ್ 24, 2021
29 °C
ಕೇರಳ: ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ತರೂರ್‌, ಥಾಮಸ್‌ಗೆ ಟಿಕೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ಕೇರಳದ ಎಲ್ಲ ಲೋಕಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್‌ ಹೈಕಮಾಂಡ್‌ ಗುರುವಾರ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೇಂದ್ರ ಸಚಿವರಾದ ಶಶಿ ತರೂರ್‌ ಮತ್ತು ಕೆ.ವಿ. ಥಾಮಸ್‌ ಅವರಿಗೆ ಮತ್ತೆ ಟಿಕೆಟ್‌ ನೀಡಿದೆ.ಇಬ್ಬರು ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಡೀನ್‌ ಕುರಿಯಾಕೋಸ್‌ ಅವರಿಗೆ ಕ್ರೈಸ್ತರು ಪ್ರಾಬಲ್ಯದ ಇಡುಕ್ಕಿ ಕ್ಷೇತ್ರದ ಟಿಕೆಟ್‌್ ನೀಡಲಾಗಿದೆ. ಪಶ್ಚಿಮ ಘಟ್ಟ ಕುರಿತ ಕಸ್ತೂರಿರಂಗನ್‌ ವರದಿಗೆ ಸಂಬಂಧಿಸಿ ಕ್ಯಾಥೊಲಿಕ್‌ ಚರ್ಚ್‌ ವಿರುದ್ಧವೇ ತಿರುಗಿ ಬಿದ್ದಿದ್ದ ಪಿ.ಟಿ. ಥಾಮಸ್‌ ಅವರು ಈ ಕ್ಷೇತ್ರದಿಂದ ಪುನರಾಯ್ಕೆ ಬಯಸಿದ್ದರು.ಕೊಲ್ಲಂ ಕ್ಷೇತ್ರದ ಹಾಲಿ ಸಂಸದ ಎನ್‌. ಪೀತಾಂಬರ್‌ ಕುರೂಪ್‌ ಅವರಿಗೂ ಟಿಕೆಟ್‌ ನಿರಾಕರಿಸಲಾಗಿದೆ. ಈ ಕ್ಷೇತ್ರವನ್ನು ಆರ್‌ಎಸ್‌ಪಿಗೆ ಬಿಟ್ಟುಕೊಡ­ಲಾಗಿದೆ. ಕಳೆದ ವಾರವಷ್ಟೇ ಆರ್‌ಎಸ್‌ಪಿ, ಎಲ್‌ಡಿಎಫ್‌ ತೊರೆದು ಯುಡಿಎಫ್‌ ಸೇರಿತ್ತು.ಹಿರಿಯ ಮುಖಂಡ ಪಿ. ಸಿ. ಚಾಕೋ ಅವರು ತ್ರಿಶೂರ್‌ ಬದಲಾಗಿ ಚಲಕ್ಕುಡಿ ಕ್ಷೇತ್ರದಿಂದ ಸ್ಪರ್ಧಿಸುವರು. ಚಲಕ್ಕುಡಿ ಕ್ಷೇತ್ರದ ಹಾಲಿ ಸಂಸದ ಕೆ.ಪಿ. ಧನಪಾಲನ್‌ ಅವರು ತ್ರಿಶೂರ್‌ನಿಂದ ಕಣಕ್ಕಿಳಿಯಲಿದ್ದಾರೆ.ಕೇಂದ್ರ ಸಚಿವ ಶಶಿ ತರೂರ್‌ ಅವರು ಪ್ರತಿಷ್ಠಿತ ತಿರುವನಂತಪುರ ಮತ್ತು ಕೆ.ವಿ. ಥಾಮಸ್‌ ಅವರು ಎರ್ನಾಕುಲಂನಿಂದ ಪುನರಾಯ್ಕೆ ಬಯಸಿದ್ದಾರೆ.‘ಪಟ್ಟಿಗೆ ಒಪ್ಪಿಗೆ ಸಿಕ್ಕಿದೆ’ ಎಂದು ನವದೆಹಲಿಯಲ್ಲಿ ನಡೆದ ಎಐಸಿಸಿ ಪದಾಧಿಕಾರಿಗಳ ಅಂತಿಮ ಸುತ್ತಿನ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ವಿ.ಎಂ. ಸುಧೀರನ್‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.ಎಲ್‌ಡಿಎಫ್‌ ಪಟ್ಟಿ ಅಂತಿಮ

ಸಿಪಿಎಂ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಲ್‌ಡಿಎಫ್‌) ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಅಂತಿಮ­ಗೊಳಿಸಿದೆ.ನಗ್ಮಾ, ರಾಜ್‌ ಬಬ್ಬರ್‌ಗೆ ಕಾಂಗ್ರೆಸ್‌ ಟಿಕೆಟ್‌

ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಗುರುವಾರ ಬಿಡುಗಡೆ ಮಾಡಿದ್ದು, ನಟಿ ನಗ್ಮಾ ಮತ್ತು ರಾಜ್‌ ಬಬ್ಬರ್‌ಗೆ ಟಿಕೆಟ್‌ ನೀಡಿದೆ.   ಉತ್ತರ ಪ್ರದೇಶದ ಮೀರತ್‌ನಿಂದ ನಗ್ಮಾ ಮತ್ತು ಗಾಜಿಯಾಬಾದ್‌ನಿಂದ ರಾಜ್‌ ಬಬ್ಬರ್‌ ಅವರು ಕಣಕ್ಕಿಳಿಯಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.