ಗುರುವಾರ , ಫೆಬ್ರವರಿ 25, 2021
19 °C

ತಲಕಾಡಿನಲ್ಲಿ ತೇಲುವ ರೆಸ್ಟೋರೆಂಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಕಾಡಿನಲ್ಲಿ ತೇಲುವ ರೆಸ್ಟೋರೆಂಟ್!

ಮೈಸೂರು: ರಜೆ ಎಂದ ತಕ್ಷಣ ನೆನಪಾಗುವುದೇ ಪ್ರವಾಸ. ಪ್ರಾಕೃತಿಕ ಸೊಬಗು, ಮನರಂಜನಾ ಸ್ಥಳ, ದೇವಸ್ಥಾನ ಹಾಗೂ ನೀರಿನ ಆಟಿಕೆಗಳು (ವಾಟರ್ ಸ್ಪೋರ್ಟ್ಸ್) ಹೀಗೆ ಎಲ್ಲವೂ ಒಂದೆಡೆ ಸಿಗುವಂತಿದ್ದರೆ ಹೇಗೆ?-ಹೌದು. ಅಂತಹ ಸ್ಥಳವೊಂದು ತಿ.ನರಸೀಪುರ ತಾಲ್ಲೂಕಿನ ತಲಕಾಡು- ಮುಡುಕುತೊರೆಯಲ್ಲಿದೆ. ಹೆಸರು ಜಲಧಾಮ. ಇಲ್ಲಿಗೆ ಭೇಟಿ ನೀಡಿದರೆ, ದೇವರ ದರ್ಶನದ ಜೊತೆಗೆ ಪ್ರಕೃತಿಯ ಮಡಿಲಲ್ಲಿ ಅರಳಿರುವ `ಜಲಧಾಮ~ ರೆಸಾರ್ಟ್‌ನ ಅನುಭವವನ್ನೂ ಸವಿಯಬಹುದು.ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಲಧಾಮ ರೆಸಾರ್ಟ್‌ನ ಮಾಲೀಕ ಟಿ.ಎ.ನಾರಾಯಣ, `ಜಲಧಾಮ ರೆಸಾರ್ಟ್‌ಗೆ ಈಗ ದಶಕದ ಸಂಭ್ರಮ. ಈಗಾಗಲೇ ತೇಲುವ ರೆಸ್ಟೋರೆಂಟ್ ಮಾಡಲಾಗಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ತೇಲುವ ಹೋಟೆಲ್ ಮಾಡುವ ಯೋಚನೆ ಇದೆ. ಪ್ರವಾಸಿಗರು ಗೋವಾಕ್ಕೆ ಹೋದರೆ ಏನೆಲ್ಲ ಸೌಲಭ್ಯಗಳು ದೊರಕಲಿವೆಯೋ, ಅವೆಲ್ಲವನ್ನೂ ಇಲ್ಲಿಯೇ ಕಲ್ಪಿಸಲು ಚಿಂತನೆ ನಡೆದಿದೆ~ ಎಂದು ತಿಳಿಸಿದರು.`ಜಲಧಾಮ ರೆಸಾರ್ಟ್‌ನಲ್ಲಿ ವಾಟರ್ ಸ್ಪೋರ್ಟ್ಸ್, 132 ಜನರಿಗೆ ತಂಗಲು ವಿಶಾಲ ಕೋಣೆಗಳು, ಬ್ಯಾಸ್ಕೆಟ್ ಬಾಲ್, ಶಟಲ್‌ಕಾಕ್, ಬ್ಯಾಡ್ಮಿಂಟನ್, ಕ್ರಿಕೆಟ್ ಆಡಲು ಅವಕಾಶ ಕಲ್ಪಿಸಲಾಗಿದೆ. ಈಜಲು ಸ್ವಿಮ್ಮಿಂಗ್ ಫೂಲ್, ಡಿಸ್ಕೋಥೆಕ್, ವಿಶಾಲ ಅಡುಗೆ ಮನೆ, ಊಟದ ಮನೆ, ಜೋಕಾಲಿ, ಪಕ್ಷಿ ವೀಕ್ಷಣೆ ಹೀಗೆ ಪ್ರವಾಸಿಗರಿಗೆ ಹಲವು ಬಗೆಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ~ ಎಂದು ಹೇಳಿದರು.`ಮುಡುಕುತೊರೆಯಲ್ಲಿ ಮಲ್ಲಿ ಕಾರ್ಜುನ ದೇವಸ್ಥಾನ, ಸೋಮನಾಥಪುರ, ತಲಕಾಡು, ಶ್ರೀರಂಗ ಪಟ್ಟಣ ಹೀಗೆ ಸಮೀಪದ ಎಲ್ಲ ದೇಗುಲ ಗಳನ್ನು ಪ್ರವಾಸಿಗರು ವೀಕ್ಷಿಸಬಹುದು. ಯೋಗ, ಮೆಡಿಟೇಶನ್, ಪ್ರಾಣಾಯಾಮ ಮಾಡಬಹುದು. ಸಂಜೆಯಾಗುತ್ತಿದ್ದಂತೆ ಹಿನ್ನೀರಿನ ಝುಳು ಝುಳು ನಾದ, ಪಕ್ಷಿಗಳ ಕಲರವ, ದೂರದ ಬೆಟ್ಟದಲ್ಲಿ ನವಿಲಿನ ನಿನಾದ ಕೇಳಬಹುದಾಗಿದೆ~ ಎಂದರು.ಜಲಧಾಮ ರೆಸಾರ್ಟ್‌ಗೆ ಹೋಗ ಬಯಸುವವರು www. jaladhama.net,  ಮೊ. 99456-95942/43 ಸಂಪರ್ಕಿಸಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.