ತಲಘಟ್ಟಪುರದಲ್ಲಿ ಮತ್ತೊಂದು ಶವ

ಸೋಮವಾರ, ಮೇ 20, 2019
30 °C

ತಲಘಟ್ಟಪುರದಲ್ಲಿ ಮತ್ತೊಂದು ಶವ

Published:
Updated:

ಬೆಂಗಳೂರು: ಸುಬ್ರಹ್ಮಣ್ಯಪುರದಲ್ಲಿ ಮಂಗಳವಾರ ಅತ್ತೆಯನ್ನು ಕೊಲೆ ಮಾಡಿ ಠಾಣೆಗೆ ಶರಣಾಗಿದ್ದ ಲೋಕೇಶ್, ಪತ್ನಿಯ ಪ್ರಿಯಕರ ಅನಿಲ್‌ನನ್ನೂ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ತಲಘಟ್ಟಪುರದ ಅರಣ್ಯ ಪ್ರದೇಶದಲ್ಲಿ ಅನಿಲ್‌ನ ಶವ ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಘಟನೆ ಸಂಬಂಧ ಮತ್ತೊಬ್ಬ ಆರೋಪಿ ಮನೋಜ್ (23) ಎಂಬಾತನನ್ನು ಬಂಧಿಸಿದ್ದಾರೆ.`ಅನಿಲ್ ಶವದ ಪತ್ತೆಗಾಗಿ ಪೊಲೀಸರ ತಂಡವು ಲೋಕೇಶ್‌ನನ್ನು ಕರೆದುಕೊಂಡು ಮಂಗಳವಾರ ರಾತ್ರಿ ತಲಘಟ್ಟಪುರಕ್ಕೆ ಹೋಗಿತ್ತು. ನಾಗೇಗೌಡನಪಾಳ್ಯ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಯಿತು. ದುಷ್ಕರ್ಮಿಗಳು ಆತನ ಕುತ್ತಿಗೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಅನಿಲ್‌ನನ್ನು ಕೊಲೆ ಮಾಡಿದೆ ಎಂದು ಲೋಕೇಶ್ ಹೇಳಿದ್ದಾನೆ~ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಮತ್ತೊಬ್ಬ ಆರೋಪಿ ಮನೋಜ್, ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಅನಿಲ್‌ನನ್ನು ಮನೆಯಿಂದ ಕಾರಿನಲ್ಲಿ ಅಪಹರಿಸಿ ಈ ಕೃತ್ಯ ಎಸಗಿದ್ದರು. ನಂತರ ಅಮೃತಾನಗರದಲ್ಲಿರುವ ಪತ್ನಿ ಚಂದ್ರಕಲಾ ಅವರ ಮನೆಗೆ ಹೋದ ಲೋಕೇಶ್, ಅತ್ತೆ ಕಮಲಮ್ಮ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry