ಸೋಮವಾರ, ಮಾರ್ಚ್ 8, 2021
22 °C

ತಲಘಟ್ಟಪುರ: ಕಸ-ಕಡ್ಡಿಯಿಂದ ಕೆರೆಗೆ ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಘಟ್ಟಪುರ: ಕಸ-ಕಡ್ಡಿಯಿಂದ ಕೆರೆಗೆ ಮುಕ್ತಿ

 ಪ್ರಜಾವಾಣಿ ಫಲಶ್ರುತಿ

ತಲಘಟ್ಟಪುರ: ಗಿಡ-ಗಂಟಿ , ಕಸ-ಕಡ್ಡಿ, ಜೊಂಡು ಕೊಳಚೆ ನೀರಿನಿಂದ ನಾರುತ್ತಿದ್ದ ಅಂಜನಾಪುರ ಕೆರೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಅಂಜನಾಪುರ ಕೆರೆಯ ಅವ್ಯವಸ್ಥೆಯ ಬಗೆ `ಪ್ರಜಾವಾಣಿ~ ಪ್ರಕಟಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಎಸ್.ಗಂಗಾಧರ್ ಅವರು ತಮ್ಮ ಪಾಲಿಕೆ ಅನುದಾನ ರೂ. 15 ಲಕ್ಷ ವೆಚ್ಚದಲ್ಲಿ ಗಿಡ-ಗಂಟಿ , ಕಸ-ಕಡ್ಡಿ, ಜೊಂಡನ್ನು ತೆರವುಗೊಳಿಸಿದ್ದಾರೆ. ಇದರಿಂದ ಕೆರೆಯಲ್ಲಿ ನೀರು ಸಂಗ್ರಹವಾಗಿ ಕ್ರಿಮಿ ಕೀಟಗಳು ನಾಶವಾಗಿವೆ. ಬಿಡಿಎ 5.60 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲು ಮಂಜೂರಾತಿ ನೀಡಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಅವರು ತಿಳಿಸಿದರು. ಈ ನಡುವೆ, ಪ್ರಭಾವಿಗಳು ಕೆರೆ ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರ ಕೂಡಲೇ ಸರ್ವೆ ಮಾಡಿಸಿ ಕೆರೆ ಅಭಿವೃದ್ಧಿಗೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.