ತಲಾ ಆದಾಯ ಹೆಚ್ಚಳ

7

ತಲಾ ಆದಾಯ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಜನರ ಜೀವನ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿರುವ ಹಿನ್ನೆಲೆಯಲ್ಲಿ  ತಲಾ ಆದಾಯವು ಪ್ರಸ್ತಕ ಹಣಕಾಸು ವರ್ಷದ ಅಂತ್ಯಕ್ಕೆ ವಾರ್ಷಿಕ ರೂ 60 ಸಾವಿರ ದಾಟಲಿದೆ ಎಂದು ಸರ್ಕಾರ ಹೇಳಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ತಲಾ ಆದಾಯವು ಶೇ 14ರಷ್ಟುಹೆಚ್ಚುವ ನಿರೀಕ್ಷೆ ಇದ್ದು, ತಿಂಗಳಿಗೆ ರೂ5 ಸಾವಿರದಂತೆ  ವಾರ್ಷಿಕ ರೂ60,972ರಷ್ಟಾಗುವ ಅಂದಾಜಿದೆ. 2010-11ನೇ ಸಾಲಿನಲ್ಲಿ ವಾರ್ಷಿಕ ತಲಾ ಆದಾಯ  ರೂ53,331ರಷ್ಟಿತ್ತು . ಕೇಂದ್ರ ಅಂಕಿ ಅಂಶಗಳ ಸಂಘಟನೆಯು (ಸಿಎಸ್‌ಒ) ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

 

ಕಳೆದ ವರ್ಷಕ್ಕೆ ಹೋಲಿಸಿದರೆ ತಲಾ ಆದಾಯ ಏರಿಕೆಯಾಗಿದೆ. ಆದರೆ, ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 8.4ರಿಂದ ಶೇ 6.9ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದೂ `ಸಿಎಸ್‌ಒ~ ಅಂದಾಜಿಸಿದೆ. ಒಟ್ಟು ರಾಷ್ಟ್ರೀಯ ಆದಾಯವನ್ನು ದೇಶದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಬರುವುದೇ ತಲಾ ಆದಾಯ. ತಲಾ ಆದಾಯವು ದೇಶದ ಒಟ್ಟಾರೆ ಆರ್ಥಿಕ ಸಮೃದ್ಧಿ ಸ್ಥಿತಿ ಬಿಂಬಿಸುವುದರಿಂದ ಇದಕ್ಕೆ ಸಾಕಷ್ಟು ಮಹತ್ವವಿದೆ. ಮಾರ್ಚ್ 2011ರ ವರೆಗಿನ ಅಂಕಿ ಅಂಶಗಳ ಪ್ರಕಾರ ದೇಶದ ಒಟ್ಟಾರೆ ಜನಸಂಖ್ಯೆಯು 118.6 ಕೋಟಿಯಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry