ಸೋಮವಾರ, ಮೇ 17, 2021
21 °C

ತಲುಪದ ನೀರು: ಆರ್‌ಟಿಪಿಎಸ್ ಯಥಾಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಾರಾಯಣಪುರ ಜಲಾಶಯದಿಂದ ಬಿಡುಗಡೆಯಾದ 2,500 ಕ್ಯೂಸೆಕ್ ನೀರು ಇನ್ನೂ ಇಲ್ಲಿಗೆ ತಲುಪದ ಕಾರಣ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಸ್ಥಿತಿ ಹಾಗೇ ಮುಂದುವರಿದಿದೆ.

 ನೀರಿನ ಕೊರತೆ ಕಾರಣ `ಆರ್‌ಟಿಪಿಎಸ್~ನ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆಯನ್ನು ಸೋಮವಾರ ಸ್ಥಗಿತಗೊಳಿಸಿದ್ದು, ಇದೇ ಸ್ಥಿತಿ ಗುರುವಾರವೂ ಮುಂದುವರಿಯಿತು.ನಾರಾಯಣಪುರ ಜಲಾಶಯದಿಂದ ಬಿಡುಗಡೆ ಮಾಡಿದ ನೀರು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್ ಸೇತುವೆ ಹತ್ತಿರ ಗುರುವಾರ ಸಂಜೆ ಹೊತ್ತಿಗೆ ಬಂದಿದೆ. ಶುಕ್ರವಾರ ಬೆಳಿಗ್ಗೆ ಶಕ್ತಿನಗರ ಹತ್ತಿರ ತಲುಪುವ ನಿರೀಕ್ಷೆ ಇದೆ.

 

ಬುಧವಾರ ರಾತ್ರಿ ಕೃಷ್ಣಾ ನದಿ ಸುತ್ತಮುತ್ತಲಿನ ದೇವದುರ್ಗ ತಾಲ್ಲೂಕಿನ ಕೆಲ ಪ್ರದೇಶದಲ್ಲಿ ಮಳೆ ಬಿದ್ದಿದೆ. ಈ ಮಳೆ ನೀರು ಕೃಷ್ಣಾ ನದಿಗೆ ಸೇರಿ ಬೇಗ ನೀರು ತಲುಪಲಿದೆ ಎಂದು ಆಡಳಿತ ವರ್ಗ ನಿರೀಕ್ಷಿಸುತ್ತಿದೆ.

`ಆರ್‌ಟಿಪಿಎಸ್~ನ ಉಳಿದ ನಾಲ್ಕು ಘಟಕಗಳಲ್ಲಿ 700 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.