ತಲೆದೂಗಿಸಿದ ಜಾನಪದ ಸೋನೆ

7

ತಲೆದೂಗಿಸಿದ ಜಾನಪದ ಸೋನೆ

Published:
Updated:
ತಲೆದೂಗಿಸಿದ ಜಾನಪದ ಸೋನೆ

ನಗರದ ಕನ್ನಡ ಭವನದಲ್ಲಿ ಇತ್ತಿಚೆಗೆ ನಡೆದ ಜಾನಪದ ಗೀತೆಗಳ `ಜಾನಪದ ಸೋನೆ' ಕಾರ್ಯಕ್ರಮ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತು. ಅಪರೂಪದ ಜಾನಪದ ಗೀತೆಗಳನ್ನು ಕೇಳಿ ತಲೆದೂಗಿದರು.ರಂಗಸಂಸ್ಥಾನ ಸಂಸ್ಥೆ ಆಯೋಜಿಸಿದ್ದ `ಜಾನಪದ ಸೋನೆ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಂಪಹನುಮಯ್ಯ ಅವರು ಮೂಲ ದಾಟಿಯ ಕೆಲವು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ನಂತರ ಮಾತನಾಡಿದ ಸಾಹಿತಿ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಜನರನ್ನು ತನ್ನೆಡೆಗೆ ಆಕರ್ಷಿಸುವ ಶಕ್ತಿ ಜಾನಪದ ಗಾಯಕರಿಗಿದೆ, ಪೇಟೆಂಟ್ ಇಲ್ಲದೇ ಇರುವುದೇ ಈ ಜಾನಪದ ಸಾಹಿತ್ಯದ ವಿಶೇಷ ಎಂದರು.ರಂಗ ಸಂಸ್ಥಾನದ ಗಾಯಕರು `ಬಾರಕ್ಕ ಮನೆಗೆ ಹೋಗೋಣ', `ಕ್ವಾರಣ್ಯ ನೀಡಮ್ಮ', `ಏ ಗಿಣಿ ಏ ಗಿಣಿಯೇ' ಸೇರಿದಂತೆ ಹಲವು ಜಾನಪದ ಗೀತೆಗಳನ್ನು ಹಾಡಿ ಚಪ್ಪಳೆ ಗಿಟ್ಟಿಸಿಕೊಂಡರು. ಬಂಡ್ಲಹಳ್ಳಿ ವಿಜಯಕುಮಾರ್, ಪ್ರತಿಭಾ ನಂದನ್, ಚೇತನಾ ಶಿಶುನಾಳ, ರಾಮ್‌ಜಿ ರಾಜನ್, ಭೂಪಾಲ್ ಅರಸ್, ರೂಪಾ, ಶೈಲಾ ಇತರೆ ಗಾಯಕರು `ಜಾನಪದ ಸೋನೆ' ಸುರಿಸಿದರು.ಕೀಬೋರ್ಡ್‌ನಲ್ಲಿ ರಾಧಾಕೃಷ್ಣ, ತಬಲಾದಲ್ಲಿ ಗಂಗಾಧರ್ ಹಾಗೂ ರಿದಂ ಪ್ಯಾಡ್‌ನಲ್ಲಿ ಜೆರಾಲ್ಡ್ ವಾದ್ಯ ಸಹಕಾರ ನೀಡಿದರು.ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ.ಕೋ.ವೆಂ.ರಾಮಕೃಷ್ಣೇಗೌಡ, ರಂಗಕಲಾವಿದ ಡಾ. ಎ.ಆರ್. ಗೋವಿಂದಸ್ವಾಮಿ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry