ಭಾನುವಾರ, ಜನವರಿ 26, 2020
27 °C

ತಲೆಬುರುಡೆ ಸಿಕ್ಕ ಸ್ಥಳ ಮಾರಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ಣಿಗೇರಿ (ಧಾರವಾಡ ಜಿಲ್ಲೆ): ತೀವ್ರ ಕುತೂಹಲ ಕೆರಳಿಸಿದ್ದ,  ತಲೆಬುರುಡೆಗಳು ಪತ್ತೆಯಾದ ಇಲ್ಲಿಯ ಜಾಗವನ್ನು ಮಾರಾಟ ಮಾಡಿರುವ ಪ್ರಸಂಗ ಶನಿವಾರ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಹಾಗೂ ಇತಿಹಾಸಕಾರರು ಹುಬ್ಬೇರಿಸುವಂತೆ ಮಾಡಿದೆ.ಅಣ್ಣಿಗೇರಿ ಪಟ್ಟಣದಲ್ಲಿ 2010ರ  ಅಗಸ್ಟ್ 28 ರಂದು ಸುಮಾರು 600 ತಲೆಬುರುಡೆಗಳು ಪತ್ತೆಯಾಗಿದ್ದವು. ವಿವಿಧ ಪರೀಕ್ಷೆಗಳಿಗಾಗಿ ಜಿಲ್ಲಾಡಳಿತ ಈ ತಲೆಬುರುಡೆಯನ್ನು ಅಹಮದಾಬಾದ್ ಪ್ರಯೋಗಾಲಯಕ್ಕೆ ಕಳಿಸಿದ್ದು, ಇತ್ತ ನಿವೇಶನ ಮಾರಾಟ ಮಾರಾಟಗೊಂಡಿದೆ.ತಲೆಬುರುಡೆ ಸಿಕ್ಕಿರುವ ಪ್ರದೇಶವನ್ನು ಜಿಲ್ಲಾಡಳಿತ ಹಾಗೂ ಪ್ರಾಚ್ಯವಸ್ತು ಇಲಾಖೆ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ವಸತಿ ನಿವೇಶನ ಸಂಖ್ಯೆ ಸಿ.ಸ.ನಂ 130/ಬ ಕ್ಷೇತ್ರ 1-06 ಹಾಗೂ ಸಿ.ಸ.ನಂ 130/ಬ ಕ್ಷೇತ್ರ 2-05 ಅದರ ಮೂಲ ಮಾಲೀಕರಾದ ಮುಮ್ಮಾಜ್‌ಬೇಗಂ ಠಾಣೇದ, ಹುಸೇನಸಾಬ ಠಾಣೇದ, ಖ್ವಾಜಾಮಹ್ಮದ್ ಹುಸೇನ ಠಾಣೇದ ಹಾಗೂ ಮಹಬೂಬಬೀ ಅಬ್ದುಲ್ ರಸೂಲ ಕಿತ್ತೂರ ಅವರು ಆ ಸ್ಥಳವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ನಿವೇಶನವನ್ನು ಶಾಹಿದಾಬೇಗಂ ಶಹಾಬುದ್ದೀನ್ ಮೂಲಿಮನಿ ಹಾಗೂ ಶಹಾಬುದ್ದಿನ್ ಮಾಬುಸಾಬ ಮೂಲಿಮನಿ ಎಂಬುವರಿಗೆ ನವಲಗುಂದ ತಾಲೂಕಾ ಉಪನೋಂದಣಿ ಆಧಿಕಾರಿಯ ದಸ್ತಾವೇಜು ಸಂಖ್ಯೆ 470/12ರ ಮೂಲಕ ಒಟ್ಟು 2,63,000/- ರೂ.ಗಳಿಗೆ ಮಾರಾಟ ಮಾಡಿರುವ ಮೂಲ ದಾಖಲೆಗಳು `ಪ್ರಜಾವಾಣಿ~ ಪ್ರತಿನಿಧಿಗೆ ದೊರಕಿವೆ.ಮಾಹಿತಿಗೆ ಡಿಸಿ ಸೂಚನೆ: `ಜಿಲ್ಲೆಯ ಅಣ್ಣಿಗೇರಿಯಲ್ಲಿ ಪತ್ತೆಯಾಗಿರುವ ತಲೆಬುರುಡೆ ಜಾಗೆಯನ್ನು ಮಾರಾಟ ಮಾಡದಂತೆ ಜಿಲ್ಲಾ ಆಡಳಿತ ಅಥವಾ ಪ್ರಾಚ್ಯವಸ್ತು ಇಲಾಖೆ ಯಾವುದೇ ಷರತ್ತು ಹಾಕಿಲ್ಲ` ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದ್ದಾರೆ.~ತಲೆಬುರುಡೆ ಪತ್ತೆಯಾದ ಜಾಗವು ಖಾಸಗಿಯವರಿಗೆ ಸೇರಿದ್ದು, ಅದರ ಮಾಲೀಕತ್ವ ಬದಲಾವಣೆಯಾದರೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ. ಯಾವುದೇ ಕಾರಣಕ್ಕೂ ತಲೆಬುರುಡೆಗೆ ಹಾನಿ ಆಗಬಾರದು ಎಂದು ಆದೇಶಿಸಲಾಗಿದೆ~ ಎಂದು ಅವರು ತಿಳಿಸಿದರು.~ಈ ಜಾಗೆಯನ್ನು ಮಾರಾಟ ಮಾಡಿರುವ ಬಗ್ಗೆ ನನಗೆ ಅಧಿಕೃತವಾಗಿ ಗೊತ್ತಾಗಿಲ್ಲ. ಈ ಬಗ್ಗೆ ವಿವರನ್ನು ನೀಡುವಂತೆ ಅಲ್ಲಿನ ಪುರಸಭೆಯ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ~ ಎಂದು ಜೈನ್ ಹೇಳಿದರು.

ಪ್ರತಿಕ್ರಿಯಿಸಿ (+)