ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

7

ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

Published:
Updated:

ಮುದ್ದೇಬಿಹಾಳ: ತಾಲ್ಲೂಕಿನ ಪ್ರಮುಖ ರಸ್ತೆಗಳನ್ನು ಮರು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಗುರುವಾರ ಒಂಬತ್ತನೇ ದಿನಕ್ಕೆ ಕಾಲಿರಿಸಿದೆ.ಸತ್ಯಾಗ್ರಹದಲ್ಲಿ ತಾಲ್ಲೂಕಿನ ನಾಲತವಾಡ ಘಟಕದ ಅಧ್ಯಕ್ಷ ಸೋಮಶೇಖರ ಚಿಕ್ಕೊಳ್ಳಿ ಇಡೀ ದಿನ ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸಿದ್ದು ವಿಶಿಷ್ಟವಾಗಿತ್ತು.ಸತ್ಯಾಗ್ರಹದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಹಿಪ್ಪರಗಿ, ಕಾರ್ಯ ದರ್ಶಿ ಪ್ರಕಾಶ ಸಂಗಮ, ಉಪಾಧ್ಯಕ್ಷ ರಾಜು ತುಂಬಗಿ, ಸಂಚಾಲಕ ಬಸವ ರಾಜ ಪುಲಾರಿ, ಬಸವರಾಜ ತತಬೀರಿ, ವೀರೇಶ ಗುರಿಕಾರ, ಅಶೋಕ ಭೋವಿ, ಭೀಮಣ್ಣ ಲೊಟಗೇರಿ, ಸಂಜು ಜೋಗಿ, ಮೆಹಬೂಬ ಕುಳಗೇರಿ, ಮಡಿವಾಳಪ್ಪ ಮಡಿವಾಳರ, ಸುರೇಶ ತಾರಿವಾಳ, ಆರ್.ಎನ್. ಕುಡಚಿ, ಜೆ.ಡಿ.ಎಸ್. ಯುವ ಧುರೀಣ ಲಾಳೇಮಶ್ಯಾಕ ನಾಯ್ಕೋಡಿ, ಎಂ.ಸಿ.ಮ್ಯಾಗೇರಿ ವಕೀಲರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry