ತವರಿಗೆ ಮರಳಿದ ಗೌತಮ್ ಗಂಭೀರ್

7

ತವರಿಗೆ ಮರಳಿದ ಗೌತಮ್ ಗಂಭೀರ್

Published:
Updated:

ಲಂಡನ್ (ಪಿಟಿಐ): ಭಾರತದ ಗೌತಮ್ ಗಂಭೀರ್ ಕೌಂಟಿ ಕ್ರಿಕೆಟ್ ಋತುವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಬಂದಿದ್ದಾರೆ. `ಕೌಟುಂಬಿಕ ಕಾರಣ'ಗಳಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.ಗಂಭೀರ್ ಪ್ರಸಕ್ತ ಕೌಂಟಿ ಋತುವಿನಲ್ಲಿ ಎಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು.`ಕೌಟುಂಬಿಕ ಕಾರಣಗಳಿಂದಾಗಿ ಗಂಭೀರ್ ಭಾನುವಾರ ತಮ್ಮ ತವರು ದೇಶ ಭಾರತಕ್ಕೆ ತೆರಳಿದ್ದಾರೆ. ಈ ಹಂತದಲ್ಲಿ ನಮಗೆ ಹೆಚ್ಚಿನ ಏನನ್ನೂ ಹೇಳಲು ಸಾಧ್ಯವಿಲ್ಲ. ಪ್ರಸಕ್ತ ಋತು ಕೊನೆಗೊಳ್ಳುವ ಮುನ್ನ ಅವರು ಮತ್ತೆ ತಂಡವನ್ನು ಸೇರುವರು ಎಂಬ ವಿಶ್ವಾಸ ನಮ್ಮದು' ಎಂದು ಎಸೆಕ್ಸ್ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry