ತವರಿಗೆ ಮರಳಿದ ಭಾರತ ತಂಡ

7

ತವರಿಗೆ ಮರಳಿದ ಭಾರತ ತಂಡ

Published:
Updated:

ಮುಂಬೈ (ಪಿಟಿಐ): ಏಕದಿನ ಮತ್ತು ಟೆಸ್ಟ್‌ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ತಂಡದ ಆಟಗಾರರು ಬುಧವಾರ  ತವರಿಗೆ ವಾಪಾಸಾಗಿದ್ದಾರೆ.ಮುಂಜಾನೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರು ನಂತರ ತಮ್ಮ ಮನೆಗಳಿಗೆ ತೆರಳಿದರು. ಕೋಚ್ ಡಂಕನ್‌ ಫ್ಲೆಚರ್ ಮತ್ತು ಬೌಲಿಂಗ್ ಕೋಚ್ ಜೋ ಡೇವ್ಸ್ ತಂಡದೊಂದಿಗೆ ಆಗಮಿಸಿಲ್ಲ, ಅವರು ನ್ಯೂಜಿಲೆಂಡ್‌ ನಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.ಆಟಗಾರರಿಗೆ ಅಲ್ಪ ಕಾಲದ ಬಿಡುವಿದ್ದು, ಅವರು ಜನವರಿ 10 ರಂದು ಇಲ್ಲಿನ ಖಾಸಗಿ ಹೊಟೇಲ್‌ ನಲ್ಲಿ ಹಮ್ಮಿಕೊಂಡಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.11ರ ರಾತ್ರಿ ಏಕದಿನ ಹಾಗೂ ಟೆಸ್ಟ್‌ ಸರಣಿ ಯನ್ನಾಡಲು ನ್ಯೂಜಿ ಲೆಂಡ್ ಪ್ರವಾ ಸಕ್ಕೆ ತೆರಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry