ಮಂಗಳವಾರ, ಏಪ್ರಿಲ್ 20, 2021
32 °C

ತವರೂರಿಗೆ ಆಗಮಿಸಿದ ವಿಜಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಮಿರ್‌ಪುರ, ಹಿಮಾಚಲ ಪ್ರದೇಶ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ತವರೂರಿಗೆ ಆಗಮಿಸಿದ ವಿಜಯ್ ಕುಮಾರ್ ಅವರಿಗೆ ಆತ್ಮೀಯ ಸ್ವಾಗತ ಲಭಿಸಿತು.ಹಮಿರ್‌ಪುರ ಜಿಲ್ಲೆಯಲ್ಲಿರುವ ಹರ್ಸಾರ್‌ಗೆ ಆಗಮಿಸಿದ ಯೋಧ ವಿಜಯ್ ಅವರನ್ನು ಕುಟುಂಬದವರು, ಜಿಲ್ಲಾಧಿಕಾರಿ, ಪೊಲೀಸರು ಹಾಗೂ ಊರಿನ ಜನರು ಬರಮಾಡಿಕೊಂಡರು. ತನ್ನ ಮೊಮ್ಮಗ ವಿಜಯ್ ಅವರನ್ನು ಅಪ್ಪಿಕೊಂಡ ಅಜ್ಜಿ ಮುದ್ದಾಡಿದರು. ಹಮಿರ್‌ಪುರದಲ್ಲಿ ಶೂಟಿಂಗ್ ರೇಂಜ್ ನಿರ್ಮಿಸಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ವಿಜಯ್ ಶ್ಲಾಘಿಸಿದರು. ಆದರೆ ಸೇನಾಪಡೆಯ ತೊರೆಯುವ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು.`ಸೇನಾಪಡೆ ನನಗೆ ತಾಯಿ ಇದ್ದಂತೆ. ನಾನು ಈ ಮಟ್ಟಕ್ಕೇರಲು ಕಾರಣ ಸೇನಾಪಡೆ~ ಎಂದರು. ಹಮಿರ್‌ಪುರ ಜಿಲ್ಲೆಯ ಜನರಿಗೆ ಪ್ರತ್ಯೇಕವಾಗಿ ಧನ್ಯವಾದ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.