ತವರೂರಿನ ತಂಡದಲ್ಲೇ ಸ್ಥಾನ; ಸೈನಾ ಖುಷಿ

ಶನಿವಾರ, ಜೂಲೈ 20, 2019
24 °C

ತವರೂರಿನ ತಂಡದಲ್ಲೇ ಸ್ಥಾನ; ಸೈನಾ ಖುಷಿ

Published:
Updated:

ನವದೆಹಲಿ (ಪಿಟಿಐ): ತವರು ರಾಜ್ಯದ  ಫ್ರಾಂಚೈಸ್‌ನಲ್ಲಿಯೇ ಸ್ಥಾನ ಪಡೆಯಬೇಕು ಎಂಬುದು ಸೈನಾ ನೆಹ್ವಾಲ್ ಅವರ ಆಸೆಯಾಗಿತ್ತು. ಅವರ ಆ ಆಸೆಯಂತೆ ಈಗ ತವರೂರಿನ ಹೈದರಾಬಾದ್ ಹಾಟ್‌ಷಾಟ್ ತಂಡದಲ್ಲೇ ಸ್ಥಾನ ಲಭಿಸಿದೆ.`ನನ್ನ ಆಸೆ ಈಡೇರಿದೆ. ತವರಿನ ಫ್ರಾಂಚೈಸ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ. ನನ್ನ ಪಾಲಿಗೆ ಇದೊಂದು ಸಂತೋಷದ ಸುದ್ದಿ. ಐಬಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಗೆಲುವಿಗೆ ಕಾರಣವಾಗುವ ವಿಶ್ವಾಸವಿದೆ' ಎಂದು ಸೈನಾ ನುಡಿದರು.ಆದರೆ ಹೈದರಾಬಾದ್ ಫ್ರಾಂಚೈಸ್‌ನಲ್ಲಿ ಅವಕಾಶ ಸಿಗದ್ದಕ್ಕೆ ಪಿ.ಕಶ್ಯಪ್ ಬೇಸರದ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು. `ಹರಾಜಿನಲ್ಲಿ ನಾನು ಕೂಡ ಖರೀದಿಯಾಗಿದ್ದೇನೆ. ಇದು ಖುಷಿ ನೀಡುವ ವಿಚಾರ. ಆದರೆ ಹೈದರಾಬಾದ್ ತಂಡದ ಪಾಲಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ಏಕೆಂದರೆ ಅದು ನನ್ನ ತವರೂರಿನ ತಂಡ. ಪಂದ್ಯಗಳ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆಯುತ್ತವೆ. ನನ್ನ ನಿವಾಸ ಕೂಡ ಸಮೀಪದಲ್ಲೇ ಇದೆ' ಎಂದು ಕಶ್ಯಪ್ ನುಡಿದಿದರು.ಕಶ್ಯಪ್ ಅವರು ಬೆಂಗಳೂರಿನ ಬಾಂಗಾ ಬೀಟ್ಸ್ ತಂಡದ ಪಾಲಾಗಿರುವುದಕ್ಕೆ ಕೋಚ್ ವಿಮಲ್ ಕುಮಾರ್ ಸಂತೋಪ ವ್ಯಕ್ತಪಡಿಸಿದರು. `45 ಲಕ್ಷ ರೂಪಾಯಿ ಮೊತ್ತಕ್ಕೆ ಕಶ್ಯಪ್ ನಮ್ಮ ತಂಡದ ಪಾಲಾಗಿದ್ದಾರೆ. ಪ್ರದ್ಯಾ ಗಾದ್ರೆ ಅವರನ್ನು ಖರೀದಿಸಲು ಪ್ರಯತ್ನಿಸಿದೆವು. ಆದರೆ ಅಪರ್ಣಾ ಬಾಲನ್ ಲಭಿಸಿದರು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry