ತಸ್ಲಿಮಾ ಪುಸ್ತಕಗಳ ಭರ್ಜರಿ ಮಾರಾಟ

7

ತಸ್ಲಿಮಾ ಪುಸ್ತಕಗಳ ಭರ್ಜರಿ ಮಾರಾಟ

Published:
Updated:

ಕೋಲ್ಕತ್ತ (ಪಿಟಿಐ): ತೀವ್ರ ವಿವಾದದ ಮಧ್ಯೆಯೂ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಆತ್ಮಚರಿತ್ರೆ `ನಿರ್‌ಬಸನ್~ ಕೃತಿ ಕೋಲ್ಕತ್ತಾದ ಪುಸ್ತಕ ಮೇಳದಲ್ಲಿ ಭರ್ಜರಿ ಮಾರಾಟ ಕಂಡಿದೆ.

`ಮೊದಲ ಮುದ್ರಣದ ಒಂದು ಸಾವಿರ ಪ್ರತಿಗಳು ಮಾರಾಟವಾಗಿದ್ದು, ಮರು ಮುದ್ರಣಕ್ಕಾಗಿ ಬೇಡಿಕೆ ಸಲ್ಲಿಸಲಾಗಿದ್ದು, ಓದುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ~ ಎಂದು ಪೀಪಲ್ಸ್ ಬುಕ್  ಸೊಸೈಟಿಯ ಶಿಬಾನಿ ಮುಖರ್ಜಿ ಹೇಳಿದರು.

ಹಿಂದೆ ಸರಿದ ನಿರ್ದೇಶಕರು: ನಸ್ರೀನ್ ಆತ್ಮಚರಿತ್ರೆ ಮತ್ತು ಕಾದಂಬರಿ ಕುರಿತು ಚಿತ್ರ ನಿರ್ಮಿಸಲು ಒಪ್ಪಿದ್ದ ಬಂಗಾಳಿ ನಿರ್ದೇಶಕರು ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ನಸ್ರೀನ್ ಹೇಳಿದ್ದಾರೆ.

ಈ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಆದರೆ ನಿರ್ದೇಶಕರು ಹಠಾತ್ ದೂರ ಸರಿದಿದ್ದಾರೆ ಎಂದು ಅವರು ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ಅವರಿಗೆ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಚಿತ್ರ ನಿರ್ಮಿಸಬಾರದು ಎಂದು ಅವರಿಗೆ ಯಾರು  ಹೇಳಿದ್ದಾರೆ ಎಂದು ಪ್ರಶ್ನಿಸಿದ ಅವರು, ಮೂಲಭೂತವಾದಿಗಳ ಬೆದರಿಕೆಯಿಂದಾಗಿ ನಿರ್ದೇಶಕರು ಈ ನಿರ್ಧಾರ ಕೈಗೊಂಡಿರಬಹುದು~ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry